ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ನಿರ್ದೇಶಕರಾಗಿ ಮಿಕಾಕೊ ಕೊಟಾನಿ ನೇಮಕ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನ ಕ್ರೀಡಾ ನಿರ್ದೇಶಕರಾಗಿ ಮಿಕಾಕೊ ಕೊಟಾನಿ ನೇಮಕಗೊಂಡಿದ್ದಾರೆ. ಗುರುವಾರ ಅವರು ಅಧಿಕಾರ ವಹಿಸಿಕೊಂಡರು.
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ 1988ರಲ್ಲಿ ನಡೆದ ಮಹಿಳಾ ಆರ್ಟಿಸ್ಟಿಕ್ ಈಜು ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು. ಕೋಜಿ ಮುರೋಫುಶಿ ಅವರ ಸ್ಥಾನದಲ್ಲಿ ಕೊಟಾನಿ ಅವರ ನೇಮಕವಾಗಿದೆ. ಮುರೋಫುಶಿ ಅವರು ಜಪಾನ್‌ನ ಕ್ರೀಡಾ ಏಜೆನ್ಸಿಯ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಜಪಾನ್‌ನ ಮಾಜಿ ಪ್ರಧಾನಿ 83 ವರ್ಷದ ಯೋಶಿರೊ ಮೊರಿ ಅವರು ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಜಪಾನ್ ಒಲಿಂಪಿಕ್ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯರೂ ಆಗಿರುವ ಕೊಟಾನಿ, ಆ ದೇಶದ ಕ್ರೀಡಾ ಮುಖ್ಯಸ್ಥರಲ್ಲಿ ಒಬ್ಬರು.
2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ ಕೂಟವನ್ನು ಕೋವಿಡ್–19 ಹಾವಳಿಯ ಹಿನ್ನೆಲೆಯಲ್ಲಿ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.