ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನಲ್ಲಿ ಚಪ್ಪಾಳೆ ತಟ್ಟಿ ಎದುರಾಳಿಗೆ ಪ್ರೋತ್ಸಾಹ; ಹೃದಯ ಗೆದ್ದ ನೀರಜ್

Last Updated 8 ಆಗಸ್ಟ್ 2021, 10:14 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಫೈನಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟು ತಮ್ಮ ಗೆಳೆಯ ಜರ್ಮನಿಯ ಜೊಹಾನ್ಸ್ ವೆಟರ್ ಅವರನ್ನು ಭಾರತದ ನೀರಜ್ ಚೋಪ್ರಾ ಹುರಿದುಂಬಿಸುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.

ಒಲಿಂಪಿಕ್ಸ್‌ನಂತಹ ಮಹಾಕ್ರೀಡಾಕೂಟದಲ್ಲಿ ಅದರಲ್ಲೂ ಪ್ರತಿಯೊಬ್ಬರೂ ಚಿನ್ನಕ್ಕಾಗಿ ಸ್ಪರ್ಧಿಸುವ ಅತಿ ಒತ್ತಡದ ಸನ್ನಿವೇಶದಲ್ಲೂ ಜರ್ಮನಿಯ ತಮ್ಮ ಗೆಳೆಯನ ಉತ್ತಮ ಪ್ರದರ್ಶನಕ್ಕಾಗಿ ನೀರಜ್ ಕೈಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಇದು ಭಾರತೀಯ ಸಂಸ್ಕೃತಿಯ ಭಾಗವೂ ಆಗಿದೆ. ಅಲ್ಲದೆ ನೀರಜ್ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ ಬಳಿಕ ನೀರಜ್ ಇದೇ ಮಾತನ್ನು ಹೇಳಿದರು. ಜೊಹಾನ್ಸ್ ವೆಟರ್, ಫೈನಲ್‌ನಲ್ಲಿ ಅಂತಿಮ 8ರ ಹಂತಕ್ಕೆತಲುಪದಿರುವುದು ಬೇಸರ ಮೂಡಿಸಿದೆ ಎಂದಿದ್ದಾರೆ.

ಏಳು ಬಾರಿ 90 ಮೀಟರ್‌ಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆದಿರುವ 28 ವರ್ಷದ ಜೋಹಾನ್ಸ್ ವೆಟರ್‌ಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲದೆ ಒಂಬತ್ತನೇ ಸ್ಥಾನಕ್ಕೆ ಕುಸಿದರು.

'ಜೋಹಾನ್ಸ್ ವೆಟರ್ ಅತ್ಯುತ್ತಮ ಜಾವೆಲಿನ್ ಎಸೆತಗಾರ. ಆದರೆ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ನೀರಜ್ ಹೇಳಿದ್ದಾರೆ.

'ಒಲಿಂಪಿಕ್ ಫೈನಲ್‌ನಲ್ಲಿ ಸಂಪೂರ್ಣ ವಿಭಿನ್ನವಾದ ಸನ್ನಿವೇಶವನ್ನು ಹೊಂದಿರುತ್ತೇವೆ. ಫಲಿತಾಂಶ ಏನಾಗಿರಲಿದೆ ಎಂಬುದನ್ನು ಅಂದಾಜಿಸುವುದು ಕಷ್ಟ. ವೆಟರ್‌ ಅವರನ್ನು ನಾನು ಬಹಳ ಗೌರವಿಸುತ್ತಿದ್ದು, ನನ್ನ ಉತ್ತಮ ಸ್ನೇಹಿತ' ಎಂದು ಹೇಳಿದ್ದಾರೆ.

ಅತ್ತ ನೀರಜ್ ಪ್ರತಿಭಾವಂತ ಜಾವೆಲಿನ್ ಎಸೆತಗಾರ, ಅವರ ಸಾಧನೆಯು ಖುಷಿ ತಂದಿದೆ ಎಂದು ವೆಟರ್ ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ನಲ್ಲಿ ಚೋಪ್ರಾ ಹಾಗೂ ವೆಟರ್, ಹೆಲ್ಸಿಂಕಿಯಿಂದ ಮೂರು ತಾಸುಗಳಷ್ಟು ಜೊತೆಯಾಗಿ ವಿಮಾನದಲ್ಲಿ ಪ್ರಯಾಣಿಸಿ ಫಿನ್‌ಲ್ಯಾಂಡ್‌ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಂದು ವೆಟರ್ ಪ್ರಥಮ ಹಾಗೂ ಚೋಪ್ರಾ ಮೂರನೇ ಸ್ಥಾನ ಗೆದ್ದಿದ್ದರು. ಅಲ್ಲದೆ ಗೇಮ್ ಪ್ಲ್ಯಾನ್ ಬಗ್ಗೆಯೂ ಪರಸ್ಪರ ಚರ್ಚಿಸುತ್ತಾರೆ.

ಚೋಪ್ರಾ ಭವಿಷ್ಯದ ತಾರೆಯಾಗಿ ಹೊರಹೊಮ್ಮಲಿದ್ದು, 90 ಮೀಟರ್‌ಗೂ ಹೆಚ್ಚು ದೂರ ಜಾವೆಲಿನ್ ಎಸೆಯಲಿದ್ದಾರೆ ಎಂದು 2018ರಲ್ಲಿ ವೆಟರ್ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT