ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ನೀರಜ್ ಚೋಪ್ರಾಗೆ ಪ್ರಧಾನಿ ಸೇರಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Last Updated 7 ಆಗಸ್ಟ್ 2021, 13:20 IST
ಅಕ್ಷರ ಗಾತ್ರ

ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ಲಕ್ಷಾಂತರ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

‘ಟೋಕಿಯೊದಲ್ಲಿ ಇತಿಹಾಸ ರಚಿಸಲಾಗಿದೆ! ನೀರಜ್ ಚೋಪ್ರಾ ಇಂದು ಏನನ್ನು ಸಾಧಿಸಿದ್ದಾರೋ ಅದು ಎಂದೆಂದಿಗೂ ನೆನಪಿನಲ್ಲುಳಿಯಲಿದೆ. ಅವರು ಅಸಾಧಾರಣವಾದದ್ದನ್ನೇ ಸಾಧಿಸಿದ್ದಾರೆ. ಅವರು ಅಪರಿಮಿತ ಉತ್ಸಾಹ ಮತ್ತು ಕೆಚ್ಚೆದೆಯಿಂದ ಆಡಿದರು. ಚಿನ್ನದ ಪದಕ ಗೆದ್ದಿರುವುದಕ್ಕಾಗಿ ಅವರಿಗೆ ಅಭಿನಂದನೆಗಳು’ ಎಂದು #Tokyo2020 ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

‘ನೀರಜ್ ಚೋಪ್ರಾ ಅವರಿಂದ ಅಭೂತಪೂರ್ವ ಗೆಲುವು! ನೀವು ಗೆದ್ದಿರುವ ಚಿನ್ನದ ಪದಕವು ಅಡೆತಡೆಗಳನ್ನು ಮುರಿದು ಇತಿಹಾಸವನ್ನು ಸೃಷ್ಟಿಸಿದೆ. ನಿಮ್ಮ ಮೊದಲ ಒಲಿಂಪಿಕ್ಸ್‌ನಲ್ಲೇ ಅಥ್ಲೀಟ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದೀರಿ. ನಿಮ್ಮ ಸಾಧನೆ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತವಿಂದು ಸಂಭ್ರಮಿಸುತ್ತಿದೆ. ಹೃತ್ಪೂರ್ವಕ ಅಭಿನಂದನೆಗಳು’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

‘ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾಗೆ ಹೃತ್ಪೂರ್ವಕ ಅಭಿನಂದನೆಗಳು. ದೇಶಕ್ಕಿದು ಹೆಮ್ಮೆಯ ಕ್ಷಣ. ಜೈಹಿಂದ್’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ನೀರಜ್ ಅವರೇ, ನಿಮ್ಮಿಂದಾಗಿ ಭಾರತವಿಂದು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ನಿಮ್ಮ ಜಾವೆಲಿನ್ ಭಾರತದ ತ್ರಿವರ್ಣ ಧ್ವಜದ ಕೀರ್ತಿಯನ್ನು ಎಲ್ಲೆಡೆ ಪಸರಿಸಿತು ಮತ್ತು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಅದನ್ನು ಪ್ರದರ್ಶಿಸುವಂತೆ ಮಾಡಿತು. ಭಾರತದ ಕ್ರೀಡಾ ಕ್ಷೇತ್ರಕ್ಕೆ ಎಂಥಾ ಸಂಭ್ರಮದ ಕ್ಷಣ’ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

‘ನೀರಜ್ ಚೋಪ್ರಾ ಚಿನ್ನ ತಂದುಕೊಟ್ಟಿದ್ದಾರೆ. ಎಂಥಾ ಅದ್ಭುತ ಪ್ರದರ್ಶನ. ಇತಿಹಾಸ ನಿರ್ಮಾಣವಾಗಿದೆ. ಭಾರತವು ನಿಮ್ಮಬಗ್ಗೆ ಹೆಮ್ಮೆಪಡುತ್ತಿದೆ. ಅಭಿನಂದನೆಗಳು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

ಉದ್ಯಮಿ ಆನಂದ್ ಮಹಿಂದರಾ ಟ್ವೀಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT