ಭಾನುವಾರ, ಜನವರಿ 16, 2022
28 °C

ಟೆನ್‌ಪಿನ್ ಬೌಲಿಂಗ್‌: ಟ್ರೈಡೆಂಟ್‌ ಸೂಪರ್ ಕಿಂಗ್ಸ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಟ್ರೈಡೆಂಟ್ ಸೂಪರ್ ಕಿಂಗ್ಸ್ ತಂಡದವರು ಕರ್ನಾಟಕ ಓಪನ್ ಟ್ರಯೊಸ್‌ ಟೆನ್‌ಪಿನ್‌ ಬೌಲಿಂಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಚರ್ಚ್‌ಸ್ಟ್ರೀಟ್‌ನಲ್ಲಿರುವ ಅಮೀಬಾ ಬೌಲಿಂಗ್ ಕೇಂದ್ರದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಟ್ರೈಡೆಂಟ್ ಸೂಪರ್ ಕಿಂಗ್ಸ್ ತಂಡವು ಗುಜರಾತ್‌ ರೋಲರ್ಸ್ ತಂಡವನ್ನು ಸೋಲಿಸಿತು.

ಬೇಕರ್ಸ್‌ ಟ್ರೈಡೆಂಟ್‌ ಮಾದರಿಯಲ್ಲಿ ನಡೆದ ಎರಡು ಗೇಮ್‌ಗಳ ಪಿನ್‌ಫಾಲ್‌ನಲ್ಲಿ ಅಕ್ರಮುಲ್ಲಾ ಬೇಗ್‌, ಹಬೀಬುರ್ ರೆಹಮಾನ್‌ ಮತ್ತು ಉಮೇಶ್ ಕುಮಾರ್ ಅವರಿದ್ದ ತಂಡವು ಗೆದ್ದಿತು.

ಎರಡೂ ಗೇಮ್‌ಗಳ ನಂತರ ಉಭಯ ತಂಡಗಳ ಬಳಿ ತಲಾ 434 ಪಾಯಿಂಟ್ಸ್ ಇದ್ದವು. ಆದರೆ ಎಂಟು ಪಿನ್‌ಗಳ ಒಂದು ಬಾಲ್‌ನ ರೂಲ್‌ ಆಫ್‌ನಲ್ಲಿ ಜಯ ಸಾಧಿಸಿದ ಸೂಪರ್‌ ಕಿಂಗ್ಸ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಸೆಮಿಫೈನಲ್‌ಗಳಲ್ಲಿ ಸೋತ ಬೆಂಗಳೂರು ಹಾಕ್ಸ್ ಮತ್ತು ಗುಜರಾತ್‌ ಗ್ಲೇಡಿಯೇಟರ್ಸ್ ತಂಡಗಳು ಕಂಚಿನ ಪದಕಗಳನ್ನು ಗಳಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು