ಶನಿವಾರ, ಆಗಸ್ಟ್ 13, 2022
25 °C

ತ್ವೇಸಾ ಮಲಿಕ್ ಜೀವನಶ್ರೇಷ್ಠ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫ್ಲಂಸರ್‌ಬರ್ಗ್, ಸ್ವಿಟ್ಜರ್ಲೆಂಡ್: ಅಮೋಘ ಆಟವಾಡಿದ ಭಾರತದ ತ್ವೇಸಾ ಮಲಿಕ್ ಅವರು ಫ್ಲಂಸರ್‌ಬರ್ಗ್ ಓಪನ್ ಮಹಿಳೆಯರ ಗಾಲ್ಫ್‌ ಟೂರ್ನಿಯಲ್ಲಿ ನಾಲ್ಕನೇ ಸ್ಥಾನವನ್ನು ಹಂಚಿಕೊಳ್ಳುವ ಮೂಲಕ ಭಾರತದ ಹೊರಗೆ ಜೀವನಶ್ರೇಷ್ಠ ಸಾಧನೆ ಮಾಡಿದರು.

ಗಾಮ್ಸ್ ವಾರ್ಡನ್‌ಬರ್ಗ್‌ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಟೂರ್ನಿಯಲ್ಲಿ 24 ವರ್ಷದ ತ್ವೇಸಾ ಇದೇ ಮೊದಲ ಬಾರಿ ಮಹಿಳಾ ಯುರೋಪಿಯನ್ ಟೂರ್‌ನಲ್ಲಿ ಪಾಲ್ಗೊಂಡಿದ್ದರು. ಅಂತಿಮ ಸುತ್ತಿನಲ್ಲಿ ಮಿಂಚಿನ ಆಟ ಪ್ರದರ್ಶಿಸಿದರು. 2019ರ ಇಂಡಿಯನ್ ಓಪನ್‌ನಲ್ಲಿ ಆರನೇ ಸ್ಥಾನವನ್ನು ಹಂಚಿಕೊಂಡದ್ದು ಅವರ ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಭಾರತದ ದೀಕ್ಷಾ ಡಾಗರ್ ಕೂಡ ಕಣದಲ್ಲಿದ್ದರು. ಅವರು ಜಂಟಿ 47ನೇ ಸ್ಥಾನ ಗಳಿಸಿದರು.

ಫಿನ್ಲೆಂಡ್‌ನ ಸನಾ ನೂಟಿನೆನ್ ಮತ್ತು ಶನಿವಾರ ಮೊದಲ ಸ್ಥಾನದಲ್ಲಿದ್ದ ಸ್ಟಿನಾ ರೀಸೆನ್ ನಡುವಿನ ಅಂತಿಮ ಸುತ್ತಿನ ಹಣಾಹಣಿ ರೋಚಕ ಸಡನ್ ಡೆತ್ ಪ್ಲೇ ಆಫ್‌ಗೆ ಸಾಗಿತು. ಇದರಲ್ಲಿ ಗೆಲುವು ಸಾಧಿಸಿದ ಸನಾ ವೃತ್ತಿ ಜೀವನದ ಮೂರನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತ್ವೇಸಾ ಮತ್ತು ದೀಕ್ಷಾ ಸ್ವಿಟ್ಜರ್ಲೆಂಡ್‌ನಲ್ಲೇ ಉಳಿಯಲಿದ್ದು ಮುಂದಿನ ವಾರ ನಡೆಯುವ ವಿಪಿ ಬ್ಯಾಂಕ್‌ ಲೇಡೀಸ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು