ಟೋಕಿಯೊ: ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದ ಉಗಾಂಡದ ವೇಟ್‌ಲಿಫ್ಟರ್ ಒಬ್ಬರುಜಪಾನ್‌ನ ಒಲಿಂಪಿಕ್ಸ್ ತರಬೇತಿ ಶಿಬಿರದಿಂದ ಶುಕ್ರವಾರ ನಾಪತ್ತೆಯಾಗಿದ್ದಾರೆ. ಜಪಾನ್ ಮತ್ತು ಉಗಾಂಡದ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ನಾಪತ್ತೆಯಾಗಿರುವ ವೇಟ್‌ಲಿಫ್ಟರ್, 20 ವರ್ಷದ ಜೂಲಿಯಸ್ ಸೆಕಿಟೊಲೆಕೊ ಅವರಿಗಾಗಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಇಜುಮಿಸಾನೊದ ಹೊಟೇಲ್‌ನಲ್ಲಿ ತಂಗಿದ್ದ ಸೆಕಿಟೊಲೆಕೊ, ಕೊರೊನಾ ವೈರಸ್ ಪರೀಕ್ಷೆಗೆ ಹಾಜರಾಗಲು ವಿಫಲರಾಗಿದ್ದರು. ಕೋಟಾ ಪದ್ಧತಿಯ ಕಾರಣ ತಾನು ಕ್ರೀಡಾಕೂಟಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಆತ ತಿಳಿದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.