ಶನಿವಾರ, ಜುಲೈ 2, 2022
21 °C

ಮ್ಯಾಕ್ಸ್‌ಗೆ ಸ್ಪಾನಿಷ್‌ ಗ್ರ್ಯಾನ್‌ಪ್ರೀ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಂಟ್‌ಮೆಲೊ, ಸ್ಪೇನ್ (ಎಎಫ್‌ಪಿ): ಬೆಲ್ಜಿಯಂ ದೇಶದ ಮ್ಯಾಕ್ಸ್‌ ವರ್ಸ್ಟ್‌ಪನ್ ಭಾನುವಾರ ಇಲ್ಲಿ ನಡೆದ ಸ್ಪಾನಿಷ್ ಗ್ರ್ಯಾನ್ ಪ್ರೀ ಪ್ರಶಸ್ತಿ ಗೆದ್ದರು. ಇದರೊಂದಿಗೆ ಫಾರ್ಮುಲಾ ಒನ್ ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. 

ರೆಡ್‌ ಬುಲ್ ತಂಡದ ಇನ್ನೊಬ್ಬ ಡ್ರೈವರ್ ಸರ್ಗಿಯೊ ಪೆರೆಜ್ ಎರಡನೇ ಸ್ಥಾನ ಪಡೆದರು. 

ಈ ರೇಸ್‌ನಲ್ಲಿ ಮ್ಯಾಕ್ಸ್‌ ಪ್ರತಿಸ್ಪರ್ಧಿ ಚಾರ್ಲ್ಸ್‌ ಲೆಕ್ಲರ್ಕ್‌ಗೆ ಅದೃಷ್ಟ ಕೈಕೊಟ್ಟಿತು. 23ನೇ ಲ್ಯಾಪ್‌ನವರೆಗೂ ಮುನ್ನಡೆಯಲ್ಲಿದ್ದ ಲೆಕ್ಲರ್ಕ್ ಅವರ ಫೆರಾರಿಯ ಪವರ್‌ ದಿಢೀರ್ ಕುಂಠಿತಗೊಂಡಿತು. ಈ ಅವಕಾಶವನ್ನು ಬಳಸಿಕೊಂಡ ಮ್ಯಾಕ್ಸ್‌ ಗುರಿಯತ್ತ ನುಗ್ಗಿದರು.

ಮ್ಯಾಕ್ಸ್ ಖಾತೆಯಲ್ಲಿ ಈಗ ಒಟ್ಟು 25 ಅಂಕಗಳಿವೆ. ಪೆರೆಜ್ (19), ಮರ್ಸಿಡಿಸ್‌ನ ರಸೆಲ್ (15), ಫೆರಾರಿ ತಂಡದ ಜೂನರ್ ಸೇಂಜ್ (12) ಮತ್ತು ಲೂಯಿಸ್ ಹ್ಯಾಮಿಲ್ಟನ್ (10) ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು