ಬೆಂಗಳೂರು: ವಿಪಿನ್ ಜಯನಾರಾಯಣ ಮತ್ತು ಅನುರಾಧಾ ಯಡವಳ್ಳಿ ಅವರು ಭಾನುವಾರ ಇಲ್ಲಿ ನಡೆದ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್ ‘ರಿಪಬ್ಲಿಕ್ ಡೇ ಕಪ್’ ಹಿರಿಯರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಲೆವೆಲ್ ಅಪ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ 40 ವರ್ಷಕ್ಕಿಂತ ಮೇಲಿನವರ ವಿಭಾಗದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಪಿನ್ 15–10, 15–10 ರಲ್ಲಿ ರವಿ ವರ್ಮಾ ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅನುರಾಧಾ 15–7, 15–11 ರಲ್ಲಿ ಸೂಸನ್ ವಿರುದ್ದ ಗೆದ್ದರು.

45 ವರ್ಷಕ್ಕಿಂತ ಮೇಲಿನವರ ಸಿಂಗಲ್ಸ್ ವಿಭಾಗದಲ್ಲಿ ಮುರಳಿ ಕೃಷ್ಣ 15–11, 15–11 ರಲ್ಲಿ ಎನ್.ಪಿ.ಆನಂದ್ ವಿರುದ್ಧವೂ; 50 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಮಧುಸೂದನ್ ರೆಡ್ಡಿ 13–15, 15–11, 15–11 ರಲ್ಲಿ ಅನಿಲ್ ದತ್ತ್ ವಿರುದ್ಧವೂ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪುರುಷರ ಡಬಲ್ಸ್ ವಿಭಾಗದ 40 ವರ್ಷಕ್ಕಿಂತ ಮೇಲಿನವರ ಫೈನಲ್‌ನಲ್ಲಿ ಕೋಳಪ್ಪ– ಸಿಜೊ 15–10, 15–11 ರಲ್ಲಿ ಪಿ.ಕೆ.ಚಂದ್ರಶೇಖರ್– ಶಿವ ವಿರುದ್ಧ ಗೆದ್ದರೆ, 45 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಪಿ.ಕೆ.ಚಂದ್ರಶೇಖರ್– ಶ್ರೀಧರ ಜೋಡಿ 15–10, 15–7 ರಲ್ಲಿ ಸುದೀಶ್– ದ್ವಾರಕ್ ಎದುರು ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.