ಶುಕ್ರವಾರ, ಡಿಸೆಂಬರ್ 3, 2021
26 °C

ಚೆಸ್‌: ಭಾರತದ ವಿಶ್ವನಾಥನ್ ಆನಂದ್ ವೀಕ್ಷಕ ವಿವರಣೆಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಭಾರತದ ವಿಶ್ವನಾಥನ್ ಆನಂದ್ ಅವರು ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡಲಿದ್ದಾರೆ. ದುಬೈನಲ್ಲಿ ನವೆಂಬರ್‌ 24ರಂದು ಈ ಪಂದ್ಯವು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ನಡುವೆ ನಡೆಯಲಿದೆ.

‘ವೀಕ್ಷಕ ವಿವರಣೆ ನೀಡಲು ದುಬೈಗೆ ತೆರಳಲು ಉತ್ಸುಕನಾಗಿದ್ದೇನೆ‘ ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್ ಪಂದ್ಯವು ‘ಬೆಸ್ಟ್ ಆಫ್‌ 14‘ ಮಾದರಿಯದ್ದಾಗಿದೆ. ಟೈಬ್ರೇಕ್ ಕೂಡ ಇರಲಿದೆ.

‘ಫಿಡೆ ಚೆಸ್ಸೇಬಲ್ ಅಕಾಡೆಮಿಯಿಂದ ದುಬೈನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಆನಂದ್‌ ಅವರು ಉಪನ್ಯಾಸ ಕೂಡ ನೀಡಲಿದ್ದಾರೆ‘ ಎಂದು ವಿಶ್ವ ಚೆಸ್‌ ಫೆಡರೇಷನ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು