ಮಂಗಳವಾರ, ಅಕ್ಟೋಬರ್ 26, 2021
26 °C

ಚೆಸ್‌: ವಿವಾನ್‌, ಪಲ್ಲವಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿವಾನ್ ಸಚ್‌ದೇವ್ ಮತ್ತು ಪಲ್ಲವಿ ರಾಜೀವ್ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ 16 ವರ್ಷದೊಳಗಿನವರು ಮತ್ತು 10 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ವಿವಾನ್ ಒಟ್ಟು 47 ಪಾಯಿಂಟ್ ಗಳಿಸಿ ಮೊದಲಿಗರಾದರು. ಅಭಿನವ್ ವಿ 36 ಪಾಯಿಂಟ್ ಗಳಿಸಿ ಎರಡನೇ ಸ್ಥಾನ ಗಳಿಸಿದರು. ರಿಷಿಲ್ ಶ್ರೀವತ್ಸ (24 ಪಾಯಿಂಟ್ಸ್‌) ಮೂರನೇ ಸ್ಥಾನ ಗಳಿಸಿದರು. ಆರ್ಯನ್ ಸೂರ್ಯ ಮತ್ತು ಕೀರ್ತನ್ ಪುರೋಹಿತ್‌ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು.

ಪಲ್ಲವಿ 33 ಪಾಯಿಂಟ್‌ಗಳೊಂದಿಗೆ 10 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು. 32 ಪಾಯಿಂಟ್‌ ಗಳಿಸಿದ ಸೂರಜ್ ಸಾಯಿ ಮತ್ತು 29 ಪಾಯಿಂಟ್ ಕಲೆ ಹಾಕಿದ ಆರಭಿ ಮಧುಕರ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ನಾಲ್ಕನೇ ಸ್ಥಾನ ಪಾವನ ರಾಜೀವ್ ಪಾಲಾದರೆ ಅಬೆಲ್ ಜೂಡಾ ಐದನೇ ಸ್ಥಾನ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು