ಗುರುವಾರ , ಆಗಸ್ಟ್ 5, 2021
22 °C

ಅಮೆರಿಕ | ಗಾಲ್ಫರ್‌ ನಿಕ್‌ ವಾಟ್ನಿಗೆ ಕೋವಿಡ್‌ ದೃಢ

ಎಪಿ Updated:

ಅಕ್ಷರ ಗಾತ್ರ : | |

Prajavani

ಹಿಲ್ಟನ್‌ ಹೆಡ್‌ ಐಲ್ಯಾಂಡ್‌, ಅಮೆರಿಕ: ಗಾಲ್ಫರ್‌ ನಿಕ್‌ ವಾಟ್ನಿ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಹೋದ ವಾರ ಗಾಲ್ಫ್‌ ಚಟುವಟಿಕೆಗಳು ಗರಿಗೆದರಿದ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಮೊದಲ ವೃತ್ತಿಪರ ಗಾಲ್ಫರ್‌ ಅವರಾಗಿದ್ದಾರೆ. ಕೋವಿಡ್‌ ಇರುವುದು ಖಚಿತವಾಗುತ್ತಿದ್ದಂತೆ ವಾಟ್ನಿ ಅವರು ಆರ್‌ಬಿಸಿ ಹೆರಿಟೆಜ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಅವರು ಆಡಿದ್ದರು. 

ಪಿಜಿಎ ಟೂರ್‌ ನಿಯಮಾವಳಿಯ ಅನ್ವಯ ಅವರು ಈಗ ಕನಿಷ್ಠ ಹತ್ತು ದಿನಗಳ ಕಾಲ ಸ್ವಯಂ ಪ್ರತ್ಯೇಕ ವಾಸದಲ್ಲಿರಬೇಕಾಗುತ್ತದೆ.

ಅಮೆರಿಕದ 39 ವರ್ಷ ವಯಸ್ಸಿನ ಗಾಲ್ಫರ್ ವಾಟ್ನಿ ಅವರು ಪಿಜಿಎ ಟೂರ್‌ನಲ್ಲಿ ಐದು ಬಾರಿ ಚಾಂಪಿಯನ್‌ ಆಗಿದ್ದಾರೆ.

‘ವಾಟ್ನಿಗೆ ಕೋವಿಡ್‌–19 ಇರುವುದು ಗೊತ್ತಾದಾಗ ನಿಜಕ್ಕೂ ಆಘಾತವಾಯಿತು. ಹೃದಯ ಬಡಿತ ಹೆಚ್ಚಿತ್ತು. ಸ್ವಲ್ಪ ಭಯವೂ ಆಗಿತ್ತು. ನಿಕ್‌ ಅವರು ಬೇಗನೆ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟೂರ್ನಿಯಲ್ಲಿ ಪಾಲ್ಗೊಂಡಿರುವ ಮತ್ತೊಬ್ಬ ಗಾಲ್ಫರ್‌ ವಾನ್‌ ಟೇಲರ್‌ ನುಡಿದಿದ್ದಾರೆ.

ವಾಟ್ನಿ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಅವರಿಗೆ ಸೋಂಕು ತಗುಲಿಲ್ಲ ಎಂಬುದು ಖಾತರಿಯಾಗಿತ್ತು. ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಗೋಚರಿಸಿದ್ದವು. ಹೀಗಾಗಿ ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು