ಲಂಡನ್: ಜೋ ವಿಲ್‌ಫ್ರೆಡ್ ಸೊಂಗಾ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಅಗತ್ಯ ‘ವೃತ್ತಿಪರ ಮಟ್ಟಕ್ಕಿಂತ’ ಕಳಪೆಯಾಗಿ ಆಡಿದ ಕಾರಣ ಆಸ್ಟ್ರೇಲಿಯಾದ ಬರ್ನಾರ್ಡ್ ಟಾಮಿಕ್ ಅವರಿಗೆ ₹ 39 ಲಕ್ಷ (45,000 ಪೌಂಡ್) ದಂಡ ವಿಧಿಸಲಾಗಿದೆ ಎಂದು ವಿಂಬಲ್ಡನ್ ಟೂರ್ನಿ ವ್ಯವಸ್ಥಾಪಕರು ಗುರುವಾರ ತಿಳಿಸಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 96ನೇ ಸ್ಥಾನದಲ್ಲಿರುವ ಟಾಮಿಕ್ ಕೇವಲ 58 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ 2–6, 1–6, 4–6 ರಲ್ಲಿ ಮಣಿದ ರೀತಿಯಿಂದ ಅಭಿಮಾನಿಗಳು ತಬ್ಬಿಬ್ಬಾಗಿದ್ದರು. ಅವರ ಆಟ ‘ಅಸಹ್ಯ ಮೂಡಿಸುವ’ ಮತ್ತು ‘ಮುಜುಗರ’ದ ರೀತಿಯಲ್ಲಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆ ವ್ಯಕ್ತವಾಗಿದ್ದವು.

‘ಸೊಂಗಾ ವಿರುದ್ಧ ಮೊದಲ ಸುತ್ತಿನಲ್ಲಿ ಟಾಮಿಕ್ ಅವರ ಪ್ರದರ್ಶನ ವೃತ್ತಿಪರ ಗುಣಮಟ್ಟ ತಲುಪಿರಲಿಲ್ಲ ಎಂದು ರೆಫ್ರಿ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಅವರಿಗೆ ಗರಿಷ್ಠ 45 ಸಾವಿರ ಪೌಂಡ್ ದಂಡ ವಿಧಿಸಲಾಗಿದೆ. ಮೊದಲ ಸುತ್ತಿನಲ್ಲಿ ಗರಿಷ್ಠ ಬಹುಮಾನ ಹಣದಿಂದ ಈ ಮೊತ್ತ ಕಳೆಯಲಾಗುತ್ತಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಂಬಲ್ಡನ್ ಮೊದಲ ಸುತ್ತಿನಲ್ಲಿ ಸೋತರ ಆಟಗಾರ ₹ 39.97 ಲಕ್ಷ ಮೊತ್ತ ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.