ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್: ಜಾಸ್ಮಿನ್‌, ಶಶಿ ಚೋಪ್ರಾಗೆ ಗೆಲುವು

Last Updated 17 ಮಾರ್ಚ್ 2023, 18:16 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಜಾಸ್ಮಿನ್‌ ಲಂಬೋರಿಯಾ ಮತ್ತು ಶಶಿ ಚೋಪ್ರಾ ಅವರು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಶುಕ್ರವಾರ ನಡೆದ 60 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಜಾಸ್ಮಿನ್‌ ಅವರು ತಾಂಜಾನಿಯದ ಎಂಬೆಗಾ ಬೆಟ್ರಿಸ್‌ ಅಂಬ್ರೋಸ್‌ ವಿರುದ್ಧ ಆರ್‌ಎಸ್‌ಸಿ ಆಧಾರದಲ್ಲಿ ಗೆದ್ದರು. ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್‌ ಕೂಟದ ಚಿನ್ನದ ಪದಕ ವಿಜೇತೆಯ ಬಲವಾದ ಪಂಚ್‌ಗಳಿಗೆ ಅಂಬ್ರೋಸ್‌ ತಬ್ಬಿಬ್ಬಾದರು.

ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ ಜಾಸ್ಮಿನ್‌ ಕೇವಲ 90 ನಿಮಿಷಗಳಲ್ಲಿ ಗೆದ್ದರು. ಮುಂದಿನ ಸುತ್ತಿನಲ್ಲಿ ಅವರು ತಜಿಕಿಸ್ತಾನದ ಸಮದೋವಾ ಮಿಜ್ಗೊನಾ ಅವರನ್ನು ಎದುರಿಸುವರು.

63 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಶಶಿ ಚೋಪ್ರಾ ಅವರು 5–0 ರಲ್ಲಿ ಕೆನ್ಯಾದ ಎಂವಾಂಗಿ ತೆರೆಸಿಯಾ ಅವರನ್ನು ಪರಾಭವಗೊಳಿಸಿದರು.

ಆದರೆ 70 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತಕ್ಕೆ ನಿರಾಸೆ ಎದುರಾಯಿತು. ಸನಮಚ ಚಾನು ಬದಲು ಕಣಕ್ಕಿಳಿದ ಶ್ರುತಿ ಯಾದವ್ 0–5 ರಲ್ಲಿ ಚೀನಾದ ಜಾವೊ ಪಾನ್‌ ಎದುರು ಮಣಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT