ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಗೌರವ್‌, ದೀಪಕ್‌- ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್

Last Updated 16 ಆಗಸ್ಟ್ 2021, 12:17 IST
ಅಕ್ಷರ ಗಾತ್ರ

ಯೂಫಾ: ಅಮೋಘ ಸಾಮರ್ಥ್ಯ ತೋರಿದ ಭಾರತದ ಗೌರವ್‌ ಬಲಿಯಾನ್‌ ಹಾಗೂ ದೀಪಕ್ ಅವರು ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

79 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗೌರವ್ ಎದುರಾಳಿಗಳನ್ನು ಸುಲಭವಾಗಿ ಚಿತ್ ಮಾಡಿ ಮುನ್ನಡೆದರು. ಮೊದಲ ಸುತ್ತಿನ ಬೌಟ್‌ನಲ್ಲಿ ತಜಿಕಿಸ್ತಾನದ ಅಬೂಬಕರ್‌ ಶುಕುರೊವ್ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿದ ಅವರು, ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 5–2ರಿಂದ ರಷ್ಯಾದ ಅಲಿಕ್‌ ಬಡ್ತೇಯ್‌ ಎದುರು ಜಯ ಸಾಧಿಸಿದರು.

ನಾಲ್ಕರ ಘಟ್ಟದ ಬೌಟ್‌ನಲ್ಲಿ ಗೌರವ್‌, ಇರಾನ್‌ನ ಮೊಹಮ್ಮದ್ ಅಸ್ಘರ್‌ ನೊಕಿದಿಲಾರಿಮಿ ಎದುರು ಸೆಣಸುವರು. ಈ ವರ್ಷ ಜೂನ್‌ನಲ್ಲಿ ನಡೆದ ಯಾಸರ್‌ ದೋಗು ಟೂರ್ನಿಯಲ್ಲಿ ಅಸ್ಘರ್‌ ಅವರು ಸೀನಿಯರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು.

ದೀಪಕ್ (97 ಕೆಜಿ ವಿಭಾಗ) ಅವರು 5–1ರಿಂದ ಬೆಲಾರಸ್‌ನ ಅಲಿಯಾಕ್ಸೆಯಿ ಪರ್ಕೊಮೆಂಕಾ ಎದುರು ಗೆದ್ದು ತಮ್ಮ ಅಭಿಯಾನ ಆರಂಭಿಸಿದರು. ಎಂಟರಘಟ್ಟದ ಹಣಾಹಣಿಯಲ್ಲಿ 9–4ರಿಂದ ಜಾರ್ಜಿಯಾದ ಲೂಕಾ ಕುಚ್ವಾ ಎದುರು ಜಯಿಸಿದರು.

ಮುಂದಿನ ಸುತ್ತಿನಲ್ಲಿ ದೀಪಕ್‌ ಅವರಿಗೆ ಅಮೆರಿಕದ ಬ್ಯಾಕ್ಸಟನ್‌ ಜೇಮ್ಸ್ ಅಮೋಸ್ ಸವಾಲು ಎದುರಾಗಿದೆ.

57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶುಭಮನ್‌ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರು. ಅವರಿಗೆ ರಷ್ಯಾದ ರಮಜಾನ್‌ ಬಾಗವುದಿನೊವ್ ಸವಾಲು ಮೀರಲಾಗಲಿಲ್ಲ. ಜೈದೀಪ್‌ (70 ಕೆಜಿ) ಹಾಗೂ ರೋಹಿತ್‌ (65 ಕೆಜಿ) ಅವರೂ ತಮ್ಮ ಮೊದಲ ಬೌಟ್‌ಗಳಲ್ಲಿ ಗೆದ್ದರು. ಆದರೆ ರಷ್ಯಾ ಎದುರಾಳಿಗಳ ವಿರುದ್ಧದ ಕ್ವಾರ್ಟರ್‌ಫೈನಲ್‌ ತಡೆ ದಾಟುವಲ್ಲಿ ವಿಫಲರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT