ಭಾನುವಾರ, ಫೆಬ್ರವರಿ 5, 2023
20 °C
ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಏಳು ಮಂದಿ ನಾಲ್ಕರ ಘಟ್ಟಕ್ಕೆ

ಸೆಮಿಫೈನಲ್‌ಗೆ ರವೀನಾ, ವಿಶ್ವನಾಥ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರವೀನಾ, ವಿಶ್ವನಾಥ್ ಸುರೇಶ್, ವಂಶಜ್ ಸೇರಿ ಭಾರತದ ಏಳು ಮಂದಿ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ತಲುಪಿದ್ದು, ಪದಕ ಖಚಿತಪಡಿಸಿದ್ದಾರೆ.

ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮಹಿಳೆಯರ 63 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ರವೀನಾ ಅವರು ರುಮೇನಿಯಾದ ಅಲೆಕ್ಸಾಂಡ್ರಾ ಕ್ರೆಟು ಅವರನ್ನು ಸೋಲಿಸಿದರು. ಪುರುಷರ ವಿಭಾಗದ ಎಂಟರಘಟ್ಟದ ಸೆಣಸಾಟಗಳಲ್ಲಿ ವಿಶ್ವನಾಥ್‌ (48 ಕೆಜಿ), ವಂಶಜ್‌ (63.5 ಕೆಜಿ) ಕ್ರಮವಾಗಿ ಆಸ್ಟ್ರೇಲಿಯಾದ ಜೈರ್ ಕೆರ್ ಮತ್ತು ಕಿರ್ಗಿಸ್ತಾನದ ಉಮರ್‌ ಲಿವಿಯಾ ಎದುರು ಏಕಪಕ್ಷೀಯವಾಗಿ ಜಯ ಸಾಧಿಸಿದರು.

ಭಾವನಾ ಶರ್ಮಾ (48 ಕೆಜಿ), ಕುಂಜರಾಣಿ ದೇವಿ ಥೊಂಗಮ್‌ (60 ಕೆಜಿ), ಲಾಶು ಯಾದವ್‌ (70 ಕೆಜಿ), ಆಶಿಶ್‌ (54 ಕೆಜಿ) ಸೆಮಿಫೈನಲ್ ತಲುಪಿದ ಇನ್ನುಳಿದ ಬಾಕ್ಸರ್‌ಗಳು.

ಗ್ರಿವಿಯಾ ದೇವಿ ಹುದ್ರೊಮ್‌ (54 ಕೆಜಿ) ಮಾತ್ರ ಎಂಟರಘಟ್ಟದಲ್ಲಿ ಸೋಲು ಕಂಡರು. ಪುರುಷರ ವಿಭಾಗದಲ್ಲಿ ದೀ‍ಪಕ್ ಮತ್ತು ಮೋಹಿತ್‌ (86 ಕೆಜಿ) ನಿರಾಸೆ ಅನುಭವಿಸಿದರು.

ಸೆಮಿಫೈನಲ್‌ ಬೌಟ್‌ಗಳು ಬುಧವಾರ ನಡೆಯಲಿದ್ದು, ಶುಕ್ರವಾರ ಮತ್ತು ಶನಿವಾರ ಫೈನಲ್ಸ್ ನಿಗದಿಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು