ಬುಧವಾರ, ಅಕ್ಟೋಬರ್ 23, 2019
21 °C

ಅಮೆರಿಕ ಓಪನ್: ಅಂಕಿತಾಗೆ ಇಲ್ಲ ಅರ್ಹತೆ

Published:
Updated:
Prajavani

ನ್ಯೂಯಾರ್ಕ್‌: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಸವಾಲು ಯಶಸ್ವಿಯಾಗಿ ದಾಟಲು ಭಾರತದ ಅಂಕಿತಾ ರೈನಾ ಅವರಿಗೆ ಸಾಧ್ಯವಾಗಲಿಲ್ಲ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅಂಕಿತಾ, ಚೆಕ್‌ ಗಣರಾಜ್ಯದ ಡೆನಿಸಾ ಅಲೆಟೋವಾ ಎದುರು ಸೋತರು.

ಭಾರತದಲ್ಲಿ ಅಗ್ರ ಕ್ರಮಾಂಕ ಹೊಂದಿರುವ ಆಟಗಾರ್ತಿ ಎರಡು ತಾಸು ಮತ್ತು 17 ನಿಮಿಷಗಳ ಪೈಪೋಟಿಯಲ್ಲಿ 7–6 (5), 4–6, 2–6ರಲ್ಲಿ ಎದುರಾಳಿಗೆ ಶರಣಾದರು.

ಸುಮಿತ್ ನಗಾಲ್ ಅರ್ಹತಾ ಸುತ್ತಿನಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ. ಎರಡನೇ ಸುತ್ತಿನಲ್ಲಿ ಅವರು ಕೆನಡಾದ ಪೀಟರ್ ಪೋಲಂಸ್ಕಿ ಎದುರು ಸೆಣಸಲಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)