ಬುಧವಾರ, ಜನವರಿ 27, 2021
27 °C
ಆಸ್ಟ್ರೇಲಿಯಾ ಓಪನ್ ಟೆನಿಸ್ ಅರ್ಹತಾ ಟೂರ್ನಿ

ಅಂತಿಮ ಸುತ್ತಿನಲ್ಲಿ ಎಡವಿದ ಅಂಕಿತಾ ರೈನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದಕ್ಕೆ ಅರ್ಹತೆ ಪಡೆದುಕೊಳ್ಳಬೇಕೆಂಬ ಭಾರತದ ಟೆನಿಸ್ ತಾರೆ ಅಂಕಿತಾ ರೈನಾ ಕನಸು ಈ ಬಾರಿಯೂ ನನಸಾಗಲಿಲ್ಲ. ಆಸ್ಟ್ರೇಲಿಯಾ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಅವರು ಬುಧವಾರ ಸರ್ಬಿಯಾದ ಓಲ್ಗಾ ಡೆನಿಲೊವಿಚ್ ಎದುರು ಸೋತರು.

ದುಬೈನಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಮಹಿಳಾ ಸಿಂಗಲ್ಸ್ ಟೂರ್ನಿಯ ಪಂದ್ಯದಲ್ಲಿ ಅಂಕಿತಾ 2–6, 6–3, 1–6ರಿಂದ ಸೋಲು ಅನುಭವಿಸಿದರು. ಈ ಹಣಾಹಣಿ ಎರಡು ತಾಸುಗಳವರೆಗೆ ನಡೆಯಿತು.

ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದಕ್ಕೆ ಅರ್ಹತೆ ಗಿಟ್ಟಿಸಲು ಅಂಕಿತಾ ನಡೆಸಿದ ಆರನೇ ಪ್ರಯತ್ನ ಇದಾಗಿತ್ತು.

ಸುಮಿತ್‌ ನಗಾಲ್‌ ಅವರು ಈ ಬಾರಿಯ ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ನಗಾಲ್ ಅವರಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಸಿಕ್ಕಿದೆ.

ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ ರಾಮಕುಮಾರ್ ರಾಮನಾಥನ್ ಅವರು ನಿರ್ಗಮಿಸಿದ್ದರೆ, ಪ್ರಜ್ಞೇಶ್ ಗುಣೇಶ್ವರನ್‌ ಎರಡನೇ ಸುತ್ತಿನಲ್ಲಿ ಸೋಲುಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು