ಮಂಗಳವಾರ, ಅಕ್ಟೋಬರ್ 22, 2019
21 °C
ರಾಮ್‌ಕುಮಾರ್‌ಗೆ ಆಘಾತ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ ಅರ್ಹತಾ ಸ್ಪರ್ಧೆ: ಅಂಕಿತಾ ಮುನ್ನಡೆ

Published:
Updated:
Prajavani

ನ್ಯೂಯಾರ್ಕ್‌: ಭಾರತದ ಅಂಕಿತಾ ರೈನಾ ಅಮೆರಿಕ ಓಪನ್‌ ಟೆನಿಸ್‌ ಅರ್ಹತಾ ಸ್ಪರ್ಧೆಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.  ಆದರೆ ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ನಿರಾಸೆ ಅನುಭವಿಸಿದರು. 

ವಿಶ್ವ ರ‍್ಯಾಂಕಿಂಗ್‌ನಲ್ಲಿ 194ನೇ ಸ್ಥಾನದಲ್ಲಿರುವ ಅಂಕಿತಾ, ತನಗಿಂತ ಮೇಲಿನ ರ‍್ಯಾಂಕ್‌ನ ಬೆಲ್ಜಿಯಂ ಆಟಗಾರ್ತಿ ವೈಸಲಿನ್‌ ಬೊನಾವೆಂಚರ್‌ ಎದುರು 6–1, 1–6, 6–2ರಿಂದ ಗೆಲುವಿನ ನಗೆ ಬೀರಿದರು.

111ನೇ ರ‍್ಯಾಂಕಿಂಗ್‌ನ ಬೊನಾವೆಂಚರ್‌ರನ್ನು 2014ರಲ್ಲಿ ಅವರ ದೇಶದಲ್ಲೇ ಅಂಕಿತಾ ಮಣಿಸಿದ್ದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ರಾಮ್‌ಕುಮಾರ್‌ ಅವರು 5–7, 6–7ರಿಂದ ಇಟಲಿಯ ಫಿಲಿಪ್ಪೊ ಬಾಲ್ಡಿ ವಿರುದ್ಧ ಸೋತರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)