ಶನಿವಾರ, ಜೂನ್ 6, 2020
27 °C

ಆನ್‌ಲೈನ್ ಟೆನಿಸ್ ತರಬೇತಿ: ಕೋರ್ಸೆರಾ ಜೊತೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೊರೊನಾ ಹಾವಳಿಯಿಂದಾಗಿ ಉಂಟಾಗಿರುವ ಸಂಕಷ್ಟದಿಂದ ತರಬೇತಿ ಆರಂಭಿಸಲು ಸಾಧ್ಯವಾಗದ ಕಾರಣ ಆನ್‌ಲೈನ್ ತರಬೇತಿಗೆ ಒತ್ತು ನೀಡಿರುವ ಎಟಿಪಿ, ಇದಕ್ಕಾಗಿ ಕೊರ್ಸೇರಾ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಟೆನಿಸ್‌ಗೆ ಸಂಬಂಧಿಸಿದ ಹೊಸ ವಿಷಯಗಳು ಮತ್ತು ಕೌಶಲಗಳನ್ನು ಕಲಿಯಲು, ಲಾಕ್‌ಡೌನ್ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವ ವಿಷಯಗಳಿಗೆ ತರಬೇತಿಯಲ್ಲಿ ಒತ್ತು ಸಿಗಲಿದೆ.

ಕೊರೊನಾ ಕಾಟದಿಂದಾಗಿ ಮಾರ್ಚ್ ಮೊದಲ ವಾರದಿಂದಲೇ ಜಗತ್ತಿನಾದ್ಯಂತ ವೃತ್ತಿಪರ ಟೆನಿಸ್ ಸ್ಥಗಿತಗೊಂಡಿತ್ತು. ಇದರಿಂದ ಅನೇಕ ಆಟಗಾರರು ತೊಂದರೆಗೆ ಸಿಲುಕಿದ್ದು ಬಹುತೇಕರು ಮಾನಸಿಕ ತೊಳಲಾಟ ಅನುಭವಿಸುತ್ತಿದ್ದಾರೆ.

ಒಪ್ಪಂದದ ಅವಧಿ ಎರಡು ವರ್ಷಗಳದ್ದಾಗಿದ್ದು ವ್ಯಾಪಾರ ವಹಿವಾಟು, ತಂತ್ರಜ್ಞಾನ, ತಂತ್ರಾಂಶ ವಿಜ್ಞಾನ, ವ್ಯಕ್ತಿತ್ವ ವಿಕಾಸ ಮತ್ತು ಮಾನಸಿಕ ಸಮತೋಲನ ಮೊದಲಾದ ನಾಲ್ಕು ಸಾವಿರಕ್ಕೂ ಹೆಚ್ಚು ವಿಷಯಗಳನ್ನು ಕಲಿಯಲು ಅವಕಾಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು