ಭಾನುವಾರ, ಜೂನ್ 20, 2021
28 °C
ವೀನಸ್‌ ಎದುರು ಗೆದ್ದ ಹಲೆಪ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಪ್ರೀ ಕ್ವಾರ್ಟರ್‌ಗೆ ಸೆರೆನಾ, ಜೊಕೊವಿಚ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಅಮೆರಿಕದ ಸೆರೆನಾ ವಿಲಿಯಮ್ಸ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್ ಅವರು ಈ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಇವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ರಾಡ್‌ ಲೇವರ್‌ ಅರೆನಾದಲ್ಲಿ ನಡೆದ ಮೂರನೇ ಸುತ್ತಿನ ಪೈಪೋಟಿಯಲ್ಲಿ ಸೆರೆನಾ 6–2, 6–1 ನೇರ ಸೆಟ್‌ಗಳಿಂದ ಉಕ್ರೇನ್‌ನ ಡಯಾನ ಯೆಸ್ಟ್ರೆಮ್‌ಸ್ಕಾ ಅವರನ್ನು ಸೋಲಿಸಿದರು.

ಹದಿನಾರರ ಘಟ್ಟದ ಹಣಾಹಣಿಯಲ್ಲಿ ಸೆರೆನಾ, ರುಮೇನಿಯಾದ ಸಿಮೊನಾ ಹಲೆಪ್‌ ಎದುರು ಸೆಣಸಲಿದ್ದಾರೆ.

ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ 6–2, 6–3ರಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಎದುರು ಗೆದ್ದರು.

ಜಪಾನ್‌ನ ಆಟಗಾರ್ತಿ ನವೊಮಿ ಒಸಾಕ 5–7, 6–4, 6–1ರಲ್ಲಿ ಸಿಹ್‌ ಸು ವೀ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಗಾರ್ಬೈನ್‌ ಮುಗುರುಜಾ 7–6, 6–2ರಲ್ಲಿ ಟೈಮಿ ಬ್ಯಾಕ್‌ಸಿಂಜಿಕಿ ಎದುರೂ, ಎಲಿನಾ ಸ್ವಿಟೋಲಿನಾ 4–6, 6–4, 7–5ರಲ್ಲಿ ಜಾಂಗ್‌ ಶೂಯಿ ಮೇಲೂ, ಅನಸ್ತೇಸಿಜಾ ಸೆವಾಸ್ಟೋವಾ 6–3, 6–3ರಲ್ಲಿ ವಾಂಗ್‌ ಕ್ವಿಯಾಂಗ್‌ ವಿರುದ್ಧವೂ, ಮ್ಯಾಡಿಸನ್‌ ಕೀಸ್‌ 6–3, 6–2ರಲ್ಲಿ ಎಲಿಸೆ ಮೆರ್ಟನ್ಸ್‌ ಮೇಲೂ ವಿಜಯಿಯಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಜೊಕೊವಿಚ್‌ ಮೂರನೇ ಸುತ್ತಿನಲ್ಲಿ 6–3, 6–4, 4–6, 6–0ರಲ್ಲಿ ಕೆನಡಾದ ಡೆನಿಶ್‌ ಶಪೊವಲೋವ್‌ ಅವರನ್ನು ಮಣಿಸಿದರು.

ಜಪಾನ್‌ನ ಕೀ ನಿಶಿಕೋರಿ 7–6, 6–1, 6–2ರಲ್ಲಿ ಜಾವೊ ಸೌಸಾ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಡೇನಿಯಲ್‌ ಮೆಡ್ವೆದೇವ್‌ 6–2, 7–6, 6–3ರಲ್ಲಿ ಡೇವಿಡ್‌ ಗೊಫಿನ್‌ ಎದುರೂ, ಪ್ಯಾಬ್ಲೊ ಕರೆನ್‌ ಬುಸ್ಟಾ 6–2, 6–4, 2–6, 6–4ರಲ್ಲಿ ಫಾಬಿಯೊ ಫಾಗ್ನಿನಿ ಮೇಲೂ, ಮಿಲೊಸ್‌ ರಾನಿಕ್‌ 6–4, 6–4, 7–6ರಲ್ಲಿ ಪಿಯೆರೆ ಹ್ಯೂಸ್‌ ಹರ್ಬರ್ಟ್‌ ವಿರುದ್ಧವೂ, ಅಲೆಕ್ಸಾಂಡರ್‌ ಜ್ವೆರೆವ್‌ 6–3, 6–3, 6–2ರಲ್ಲಿ ಅಲೆಕ್ಸ್‌ ಬೋಲ್ಟ್ ಮೇಲೂ, ಬೋರ್ನಾ ಕೊರಿಕ್‌ 2–6, 6–3, 6–4, 6–3ರಲ್ಲಿ ಫಿಲಿಪ್‌ ಕ್ರಾಜಿನೋವಿಚ್‌ ವಿರುದ್ಧವೂ ಗೆದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು