ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಸ್ಬೇನ್: ಕ್ವಾರ್ಟರ್‌ಗೆ ರಫೆಲ್‌ ನಡಾಲ್

Published : 4 ಜನವರಿ 2024, 23:13 IST
Last Updated : 4 ಜನವರಿ 2024, 23:13 IST
ಫಾಲೋ ಮಾಡಿ
Comments

ಬ್ರಿಸ್ಬೇನ್: ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಬ್ರಿಸ್ಬೇನ್ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೇಸನ್ ಕುಬ್ಲರ್ ಅವರನ್ನು 6–1, 6–2ರಿಂದ ಸುಲಭವಾಗಿ ಹಿಮ್ಮೆಟ್ಟಿಸಿದರು.

ಗಾಯದ ಕಾರಣದಿಂದ ಒಂದು ವರ್ಷ ಅಂಕಣದಿಂದ ದೂರ ಉಳಿದಿದ್ದ ಸ್ಪೇನ್‌ ಆಟಗಾರ ಬ್ರಿಸ್ಬೇನ್ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದಾರೆ. 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ 37 ವರ್ಷದ ನಡಾಲ್‌, ಆರಂಭಿಕ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಡೊಮಿನಿಕ್ ಥೀಮ್ (ಆಸ್ಡ್ರಿಯಾ) ಅವರಿಗೆ ಆಘಾತ ನೀಡಿ ಶುಭಾರಂಭ ಮಾಡಿದ್ದರು.

ನಡಾಲ್ ಸದ್ಯ 672ನೇ ಕ್ರಮಾಂಕ ಹೊಂದಿದ್ದು, ಪಂದ್ಯದ ಆರಂಭದಿಂದಲೂ ಹಿಡಿತ ಸಾಧಿಸಿದ ನಡಾಲ್, ಮೊದಲ ಗೇಮ್‌ನಲ್ಲಿ 5–0 ಮುನ್ನಡೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT