ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನ್ಸಿನಾಟಿ ಓ‍ಪನ್‌ ಟೂರ್ನಿಯಲ್ಲಿ ಸೋಲು; ಕ್ಷಮೆಯಾಚನೆ

ರ‍್ಯಾಕೆಟ್‌ ಕುಕ್ಕಿದ ಅಲ್ಕರಾಜ್‌
Published 17 ಆಗಸ್ಟ್ 2024, 23:40 IST
Last Updated 17 ಆಗಸ್ಟ್ 2024, 23:40 IST
ಅಕ್ಷರ ಗಾತ್ರ

ಸಿನ್ಸಿನಾಟಿ: ವಿಶ್ವದ ಮೂರನೇ ಕ್ರಮಾಂಕದ ಟೆನಿಸಿಗ ಕಾರ್ಲೋಸ್‌ ಅಲ್ಕರಾಜ್ ಅವರು ವಿರಳವೆಂಬಂತೆ ಪಂದ್ಯವೊಂದರ ವೇಳೆ  ಹತಾಶೆಯಿಂದ ರ‍್ಯಾಕೆಟ್‌ಅನ್ನು ಆಗಾಗ ನೆಲಕ್ಕೆ ಕುಕ್ಕಿದರು. ಶುಕ್ರವಾರ ನಡೆದ ಸಿನ್ಸಿನಾಟಿ ಓಪನ್‌ ಟೂರ್ನಿಯ ಈ ಪಂದ್ಯದಲ್ಲಿ ನಾಲ್ಕು ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ಸ್ಪೇನ್‌ನ ಆಟಗಾರ 6–4 6–7 (5–7), 4–6 ರಲ್ಲಿ ಶ್ರೇಯಾಂಕರಹಿತ ಆಟಗಾರ ಗೇಲ್‌ ಮಾನ್ಫಿಲ್ಸ್‌ ಅವರಿಗೆ ಮಣಿದರು.

ಗುರುವಾರ ರಾತ್ರಿ ನಡೆಯಬೇಕಾಗಿದ್ದ ಎರಡನೇ ಸುತ್ತಿನ ಈ ಪಂದ್ಯ ಮಳೆಯಿಂದಾಗಿ ಅರ್ಧದಲ್ಲೇ ಮುಂದಕ್ಕೆ ಹೋಗಿತ್ತು. ಆಗ ಆಟಗಾರರು ಎರಡನೇ ಸೆಟ್‌ನ ಟೈಬ್ರೇಕರ್ ಆಡುತ್ತಿದ್ದರು. 37 ವರ್ಷ ವಯಸ್ಸಿನ ಮಾನ್ಫಿಲ್ಸ್‌ ಅವರು ಎರಡನೇ ಶ್ರೇಯಾಂಕದ ಆಟಗಾರನ ವಿರುದ್ಧ ಕೊನೆಯ ಎರಡೂ ಸೆಟ್‌ಗಳನ್ನು ಗೆದ್ದು 16ರ ಸುತ್ತಿಗೆ ಮುನ್ನಡೆದರು.

ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಾಗಿರುವ ಅಮೆರಿಕ ಓಪನ್‌ಗೆ ಮೊದಲು ಅಲ್ಕರಾಜ್‌ಗೆ ಇದು ಒಳ್ಳೆಯ ಸಿದ್ಧತೆಯಾಗಲಿಲ್ಲ.

‘ನನ್ನ ಟೆನಿಸ್‌ ಜೀವನದಲ್ಲೇ ಆಡಿದ ಅತ್ಯಂತ ಕೆಟ್ಟ ಪಂದ್ಯ ಇದಾಗಿತ್ತು ಎಂಬ ಭಾವನೆ ಮೂಡಿತು. ನಾನು ಉತ್ತಮ ಅಭ್ಯಾಸ ನಡೆಸಿದ್ದೆ. ಚೆನ್ನಾಗಿ ಆಡುತ್ತಿದ್ದೇನೆಂಬ ಭಾವನೆಯೂ ಮೂಡಿತು. ಆದರೆ ನಾನಂದುಕೊಂಡ ಹಾಗೆ ಆಗಲಿಲ್ಲ. ಇದನ್ನೆಲ್ಲಾ ಮರೆತು ನ್ಯೂಯಾರ್ಕ್‌ಗೆ ತೆರಳುವೆ’ ಎಂದು ಅವರು ಸ್ಪೇನ್‌ನ ಆಟಗಾರ ಹೇಳಿದರು. ಅಮೆರಿಕ ಓಪನ್ ಆಗಸ್ಟ್‌ 26ರಂದು ಆರಂಭ ಆಗಲಿದೆ.

‘ನನ್ನ ವರ್ತನೆಗೆ ಕ್ಷಮೆಯಾಚಿಸುತ್ತೇನೆ. ಅಂಕಣದಲ್ಲಿ ಆ ರೀತಿಯ ಪ್ರತಿಕ್ರಿಯೆ ಒಳ್ಳೆಯದಲ್ಲ. ಉದ್ವಿಗ್ನತೆಗೆ ಒಳಗಾದಾಗ ಭಾವನೆಗಳನ್ನು ನಿಯಂತ್ರಿಸುವುದು ತುಂಬಾ ಕಠಿಣ’ ಎಂದು ಶನಿವಾರ ಅವರು ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಇದೇ ಟೂರ್ನಿಯ ಫೈನಲ್‌ನಲ್ಲಿ ಅವರು ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT