ಮಂಗಳವಾರ, ಮಾರ್ಚ್ 28, 2023
25 °C

Australian Open 2023: ಹಾಲಿ ಚಾಂಪಿಯನ್ ನಡಾಲ್ ನಿರ್ಗಮನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿರುವ ಹಾಲಿ ಚಾಂಪಿಯನ್ ರಫೆಲ್ ನಡಾಲ್, ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.

ರೊಡ್ ಲಾವೆರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ನಡಾಲ್ ಅವರನ್ನು 65ನೇ ರ‍್ಯಾಂಕ್‌ನ ಅಮೆರಿಕದ ಮೆಕೆಂಜಿ ಮೆಕ್‌ಡೋನಾಲ್ಡ್ 6-4, 6-4, 7-5ರ ಅಂತರದಲ್ಲಿ ಮಣಿಸಿದರು.

ಇದನ್ನೂ ಓದಿ: 

36 ವರ್ಷದ ನಡಾಲ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಳಪೆ ಪ್ರದರ್ಶನ ನೀಡಲು ಕಾರಣವಾಯಿತು.

ಕಳೆದ ಏಳು ವರ್ಷಗಳ ಗ್ರ್ಯಾನ್ ಸ್ಲಾಮ್ ಇತಿಹಾಸದಲ್ಲಿ ನಡಾಲ್ ಅವರಿಂದ ದಾಖಲಾದ ಅತಿ ಕೆಟ್ಟ ಪ್ರದರ್ಶನ ಇದಾಗಿದೆ.

ದಾಖಲೆಯ 22 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್, 2009 ಹಾಗೂ 2022ರಲ್ಲಿ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಕಿರೀಟ ಗೆದ್ದಿದ್ದರು.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು