ಒಡೆನ್ಸ್, ಡೆನ್ಮಾರ್ಕ್: ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ನಂತರ ಭಾರತದ ಪಿ.ವಿ.ಸಿಂಧು ಅವರ ಸೋಲಿನ ಸರಪಳಿ ಮುಂದುವರಿದಿದೆ. ಕಳೆದ ತಿಂಗಳು ನಡೆದ ಚೀನಾ ಓಪನ್ ಟೂರ್ನಿಯ ಎರಡನೇ ಸುತ್ತಿನಲ್ಲೂ ಕೊರಿಯಾ ಓಪನ್ನ ಮೊದಲ ಸುತ್ತಿನಲ್ಲೂ ಹೊರ ಬಿದ್ದಿದ್ದ ಸಿಂಧು ಗುರುವಾರ ಮತ್ತೆ ನಿರಾಸೆಗೆ ಒಳಗಾದರು.

ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸಿಂಧು ದಕ್ಷಿಣ ಕೊರಿಯಾದ ಸಿ ಯಂಗ್ ಆ್ಯನ್ಗೆ 14–21, 17–21ರಲ್ಲಿ ಮಣಿದರು.

ಮೊದಲ ಗೇಮ್ನಲ್ಲಿ ಎರಡು ಪಾಯಿಂಟ್ಗಳನ್ನು ಬಿಟ್ಟುಕೊಟ್ಟ ನಂತರ ಖಾತೆ ತೆರೆದ ಸಿಂಧು ನಂತರ ಸತತ 4 ಪಾಯಿಂಟ್ ಬಿಟ್ಟುಕೊಟ್ಟರು. 11–7ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಸಿ ಯಂಗ್ ಆ್ಯನ್ ನಂತರವೂ ಚಾಕಚಕ್ಯತೆ ಆಟದ ಮೂಲಕ ಸಿಂಧು ಅವರನ್ನು ಕಂಗೆಡಿಸಿದರು.

ಎರಡನೇ ಗೇಮ್ನ ಆರಂಭದಲ್ಲಿ ಸಿಂಧು ಎರಡು ಪಾಯಿಂಟ್ ಗಳಿ ಸಿದರೂ ನಂತರ ಎದುರಾಳಿ ಆಟ ಗಾರ್ತಿ ಚೇತರಿಸಿಕೊಂಡರು. ಆದರೆ ಸಿಂಧು ಪಟ್ಟು ಬಿಡಲಿಲ್ಲ. ಸತತ ಪಾಯಿಂಟ್ಗಳನ್ನು ಕಲೆ ಹಾಕಿದರು.

ಎದುರಾಳಿ 15ನೇ ಪಾಯಿಂಟ್ ಗಳಿಸುವವರೆಗೂ ಸಿಂಧು (16–15) ಮುನ್ನಡೆಯಲ್ಲಿದ್ದರು. ಆದರೆ 16–16ರ ಸಮಬಲ ಸಾಧಿಸಿದ ನಂತರ ಕೊರಿಯಾ ಆಟಗಾರ್ತಿ ಹಿಂದಿರುಗಿ ನೋಡಲಿಲ್ಲ. ಸತತ 4 ಪಾಯಿಂಟ್ ಗಳಿಸಿ 20–16ರ ಮುನ್ನಡೆ ಸಾಧಿಸಿದ ಸಿ ಯಂಗ್ ಆ್ಯನ್ ಮತ್ತೆ ಕೇವಲ ಒಂದು ಪಾಯಿಂಟ್ ಮಾತ್ರ ಬಿಟ್ಟುಕೊಟ್ಟು ಗೇಮ್ ಮತ್ತು ಪಂದ್ಯ ಗೆದ್ದರು.

ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಸಮೀರ್ ವರ್ಮಾ ಮತ್ತು ಸಾಯಿ ಪ್ರಣೀತ್ ನಿರಾಸೆ ಕಂಡರು. ಸಮೀರ್ ವರ್ಮಾ ಚೀನಾದ ಲಾಂಗ್ ಚೆನ್ಗೆ 21–12, 21–10ರಲ್ಲಿ ಮಣಿದರೆ ಜಪಾನ್ನ ಕೆಂಟೊ ಮೊಮೊಟ 21–6, 21–14ರಲ್ಲಿ ಪ್ರಣೀತ್ಗೆ ಕಹಿ ಉಣಿಸಿದರು.

ಸಮೀರ್ ವರ್ಮಾ, ಸಾಯಿಗೆ ನಿರಾಸೆ
ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಸಮೀರ್ ವರ್ಮಾ ಮತ್ತು ಸಾಯಿ ಪ್ರಣೀತ್ ನಿರಾಸೆ ಕಂಡರು. ಸಮೀರ್ ವರ್ಮಾ ಚೀನಾದ ಲಾಂಗ್ ಚೆನ್ಗೆ 21–12, 21–10ರಲ್ಲಿ ಮಣಿದರೆ ಜಪಾನ್ನ ಕೆಂಟೊ ಮೊಮೊಟ 21–6, 21–14ರಲ್ಲಿ ಪ್ರಣೀತ್ಗೆ ಕಹಿ ಉಣಿಸಿದರು. ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಚೀನಾದ ಚೆಂಗ್ ಕಾಯ್ ಹ್ಯಾನ್–ಹೋ ಡಾಂಗ್ ಜೊ ಅವರಿಗೆ 16–21, 15–21ರಲ್ಲಿ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.