ಬೆಂಗಳೂರು: ಪ್ರಬಲರನ್ನು ಸೋಲಿಸುತ್ತ ಗಮನ ಸೆಳೆದಿರುವ ತಮಿಳುನಾಡಿನ ದಿಯಾ ರಮೇಶ್, ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅಂಗಣದಲ್ಲಿ ಗುರುವಾರ ಮತ್ತೊಂದು ಅಮೋಘ ಸಾಧನೆ ಮಾಡಿದರು. ಟ್ರಾನ್ಸ್ಫಾರ್ಮ್ ಎಐಟಿಎ 14 ವರ್ಷದೊಳಗಿನವರ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಅಣ್ವಿ ಪುನಗಂಟಿ ವಿರುದ್ಧ ಗೆದ್ದು ದಿಯಾ ಫೈನಲ್ ಪ್ರವೇಶಿಸಿದರು.

ಸೆಮಿಫೈನಲ್ನಲ್ಲಿ 6-2, 2-6, 6-3ರಲ್ಲಿ ಎದುರಾಳಿಯನ್ನು ಮಣಿಸಿದ ದಿಯಾ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಜೈನಾ ಅಂಬರ್ ವಿರುದ್ಧ ಸೆಣಸುವರು. ಸುಶ್ಮಿತಾ ರವಿ ಎದುರಿನ ಪಂದ್ಯದಲ್ಲಿ ಜೈನಾ6-3, 6-4ರಲ್ಲಿ ಜಯ ಸಾಧಿಸಿದರು.

ಬಾಲಕರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಮಣಿಪುರ ಆಟಗಾರ ಅಶ್ವಜೀತ್6-2, 6-4ರಲ್ಲಿ ಬಿ.ಶೌರ್ಯ ವಿರುದ್ಧ ಗೆದ್ದು ಅಂತಿಮ ಹಣಾಹಣಿಗೆ ಸಜ್ಜಾದರು. ಫೈನಲ್ನಲ್ಲಿ ಅವರು ಕ್ಷಿತಿಜ್ ಆರಾಧ್ಯ ಎದುರು ಸೆಣಸುವರು. ಡಿ.ಆರಾಧ್ಯ ವಿರುದ್ಧದ ಪಂದ್ಯದಲ್ಲಿ ಕ್ಷಿತಿಜ್7-6, 3-6, 6-1ರಲ್ಲಿ ಜಯ ಗಳಿಸಿದರು.

ಲೆವಿನ್–ಶರಣ್, ಅದಿತಿ–ಸುಶ್ಮಿತಾಗೆ ಪ್ರಶಸ್ತಿ

ಬಾಲಕರ ವಿಭಾಗದ ಡಬಲ್ಸ್ ಫೈನಲ್ನಲ್ಲಿ ಎಸ್.ಲೆವಿನ್ ಮತ್ತು ಶರಣ್ ಪ್ರಕಾಶ್ 7-5, 6-2ರಲ್ಲಿ ಅಯಾಜ್ ಅಹಿಲ್ ಮತ್ತು ದಿಗಂತ್ ವಿರುದ್ಧ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಬಿ.ಅದಿತಿ ಮತ್ತು ಸುಶ್ಮಿತಾ ರವಿ ಜೋಡಿ ಚಾಂಪಿಯನ್ ಆದರು. ದಿಯಾ ಮತ್ತು ಅಣ್ವಿ ಪುನಗಂಟಿ ವಿರುದ್ಧ ಅವರು 2-6, 6-2, 10-3ರಲ್ಲಿ ಗೆಲುವು ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.