ಪ್ಯಾರಿಸ್ : 13 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಅವರಿಗೆ ಸೋಲುಣಿಸಿದ ನೊವಾಕ್ ಜೊಕೊವಿಚ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್ಗೆ ತಲುಪಿದ್ದಾರೆ. ಶುಕ್ರವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಅಗ್ರಕ್ರಮಾಂಕದ ಸರ್ಬಿಯಾ ಆಟಗಾರನಿಗೆ 3-6, 6-3, 7-6 , 6-2ರಿಂದ ಜಯ ಒಲಿಯಿತು. ಭಾನುವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಅವರು ಗ್ರೀಸ್ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಎದುರಿಸುವರು.

ನಾಲ್ಕರ ಘಟ್ಟದ ಮತ್ತೊಂದು ಸೆಣಸಾಟದಲ್ಲಿ ಗ್ರೀಸ್ನ ಸಿಟ್ಸಿಪಾಸ್ 6-3, 6-3, 4-6, 4-6, 6-3ರಿಂದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರ ಸವಾಲು ಮೀರಿದರು.

ಟೂರ್ನಿಯಲ್ಲಿ ಫೈನಲ್ ತಲುಪಿರುವ ಜೊಕೊವಿಚ್ ಪ್ರಮುಖ ದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ. ಇಲ್ಲಿ ಪ್ರಶಸ್ತಿ ಗೆದ್ದರೆ 52 ವರ್ಷಗಳ ಬಳಿಕ ನಾಲ್ಕೂ ಗ್ರ್ಯಾನ್ಸ್ಲಾಮ್ ಟೂರ್ನಿಗಳನ್ನು ಎರಡೆರಡು ಬಾರಿ ಜಯಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.1969ರಲ್ಲಿ ರಾಡ್ ಲೇವರ್ ಈ ಸಾಧನೆ ಮಾಡಿದ್ದರು. ಅಲ್ಲದೆ ನಾಲ್ಕೂ ಪ್ರಮುಖ ಟ್ರೋಫಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ರಾಯ್ ಎಮರ್ಸನ್ ಮತ್ತು ರಾಡ್ ಲೇವರ್ ಅವರ ಸಾಲಿಗೆ ಜೊಕೊವಿಚ್ ಸೇರಲಿದ್ದಾರೆ.

19ನೇ ಗ್ರ್ಯಾನ್ಸ್ಲಾಮ್ ಮೇಲೆ ಜೊಕೊವಿಚ್ ಕಣ್ಣಿಟ್ಟಿದ್ದಾರೆ.

ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಡಾಲ್ ಅವರನ್ನು ಒಂದಕ್ಕಿಂತ ಹೆಚ್ಚು ಬಾರಿ ಮಣಿಸಿದ ಶ್ರೇಯವೂ ಜೊಕೊವಿಚ್ ಪಾಲಾಯಿತು. 2015ರ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಸ್ಪೇನ್ ಆಟಗಾರ ಜೊಕೊವಿಚ್ಗೆ ಮಣಿದಿದ್ದರು. 2005ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದ ಬಳಿಕ ಪ್ಯಾರಿಸ್ನಲ್ಲಿ ಆಡಿದ 108 ಪಂದ್ಯಗಳ ಪೈಕಿ ನಡಾಲ್ ಕೇವಲ ಮೂರರಲ್ಲಿ ಮಾತ್ರ ಸೋಲನುಭವಿಸಿದ್ದಾರೆ.

ಈ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಅವರು ನಡಾಲ್ ಅವರ ಎಂಟು ಸರ್ವ್ ಮುರಿದರು. ಮೂರನೇ ಶ್ರೇಯಾಂಕದ ಸ್ಪೇನ್ ಆಟಗಾರ 55 ಬಾರಿ ಪ್ರಮಾದ ಎಸಗಿದರು.

ಸಿಟ್ಸಿಪಾಸ್ ವಿರುದ್ಧ ಜೊಕೊವಿಚ್ 5–2ರ ಗೆಲುವಿನ ದಾಖಲೆ ಹೊಂದಿದ್ದಾರೆ. ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯ ಐದು ಸೆಟ್ಗಳ ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾ ಆಟಗಾರ ಜಯದ ನಗೆ ಬೀರಿದ್ದರು.

ಜೊಕೊವಿಚ್ಗೆ ಇದು 29ನೇ ಗ್ರ್ಯಾನ್ಸ್ಲಾಮ್ ಫೈನಲ್ ಆದರೆ, ಸಿಟ್ಸಿಪಾಸ್ಗೆ ಮೊದಲನೆಯದ್ದು.

ಎಟಿಪಿ ಕ್ರಮಾಂಕ

ನೊವಾಕ್ ಜೊಕೊವಿಚ್ 1

ಸ್ಟೆಫಾನೊಸ್ ಸಿಟ್ಸಿಪಾಸ್ 5

ಉಭಯ ಆಟಗಾರರ ಫೈನಲ್ ಹಾದಿ

ನೊವಾಕ್ ಜೊಕೊವಿಚ್

1ನೇ ಸುತ್ತು: ಅಮೆರಿಕದ ಟೆನ್ನಿಸ್ ಸ್ಯಾಂಡ್ಗ್ರೇನ್ ಎದುರು 6-2, 6-4, 6-2ರಿಂದ ಜಯ

2ನೇ ಸುತ್ತು: ಉರುಗ್ವೆಯ ಪ್ಯಾಬ್ಲೊ ಕ್ಯೂವಸ್ ಎದುರು 6-1, 6-4, 6-1ರ ಜಯ

3ನೇ ಸುತ್ತು: ಲಿಥುವೇನಿಯಾದ ರಿಕಾರ್ಡಸ್ ಬೆರಂಕಿಸ್ ವಿರುದ್ಧ 6-3, 6-2, 6-4ರಿಂದ ಜಯ

4ನೇ ಸುತ್ತು: ಇಟಲಿಯ ಲೊರೆಂಜೊ ಮುಸೆಟ್ಟಿ ಎದುರು 6-7, 6-7 , 6-1, 6-0, 4-0 ರಿಂದ ಜಯ (ಲೊರೆಂಜೊ ನಿವೃತ್ತಿ)

ಕ್ವಾರ್ಟರ್ಫೈನಲ್: ಇಟಲಿಯ ಮಟ್ಟೆಯೊ ಬೆರೆಟ್ಟಿನಿ ಎದುರು 6-3, 6-2, 6-7, 7-5ರಿಂದ ಜಯ

ಸೆಮಿಫೈನಲ್: ಸ್ಪೇನ್ನ ರಫೆಲ್ ನಡಾಲ್ ಎದುರು 3-6, 6-3, 7-6 , 6-2ರಿಂದ ಜಯ

ಸ್ಟೆಫಾನೊಸ್ ಸಿಟ್ಸಿಪಾಸ್

1ನೇ ಸುತ್ತು: ಫ್ರಾನ್ಸ್ನ ಜೆರೆಮಿ ಚಾರ್ಡಿ ಎದುರು 7-6, 6-3, 6-1ರಿಂದ ಜಯ

2ನೇ ಸುತ್ತು: ಸ್ಪೇನ್ನ ಪೆರ್ಡೊ ಮಾರ್ಟಿನೆಜ್ ಎದುರು 6-3, 6-4, 6-3ರಿಂದ ಜಯ

3ನೇ ಸುತ್ತು: ಅಮೆರಿಕದ ಜಾನ್ ಇಸ್ನೆರ್ ಎದುರು 5-7, 6-3, 7-6, 6-1ರಿಂದ ಗೆಲುವು

4ನೇ ಸುತ್ತು: ಸ್ಪೇನ್ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು 6-3, 6-2, 7-5ರಿಂದ ಜಯ

ಕ್ವಾರ್ಟರ್ಫೈನಲ್: ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಎದುರು 6-3, 7-6, 7-5ರಿಂದ ಜಯ

ಸೆಮಿಫೈನಲ್: ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಎದುರು 6-3, 6-3, 4-6, 4-6, 6-3ರಿಂದ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.