ಫೆಡರರ್‌, ಜೊಕೊವಿಚ್‌ ಪ್ರೀ ಕ್ವಾರ್ಟರ್‌ಗೆ

7
ನಾಲ್ಕು ತಾಸುಗಳ ಪಂದ್ಯದಲ್ಲಿ ಅಲೆಕ್ಸ್ ಡಿ ಮಿನಾರ್‌ ಎದುರು ಗೆದ್ದ ಮರಿನ್ ಸಿಲಿಕ್‌

ಫೆಡರರ್‌, ಜೊಕೊವಿಚ್‌ ಪ್ರೀ ಕ್ವಾರ್ಟರ್‌ಗೆ

Published:
Updated:
Deccan Herald

ನ್ಯೂಯಾರ್ಕ್‌: ಸ್ವಿಟ್ಜ್‌ರ್ಲೆಂಡ್‌ನ ರೋಜರ್ ಫೆಡರರ್‌ ಅವರು ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿದರು.

ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅವರನ್ನು 6–4, 6–1, 7–5ರಿಂದ ಮಣಿಸಿದರು.

ಫೋರ್‌ ಹ್ಯಾಂಡ್‌ ಫ್ಲಿಕ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ರೋಜರ್ ಫೆಡರರ್‌ ಆರಂಭದಲ್ಲೇ ಪಾಯಿಂಟ್‌ಗಳನ್ನು ಕಲೆ ಹಾಕಿದರು. ನಂತರ ಸುಲಭವಾಗಿ ಎರಡು ಸೆಟ್‌ಗಳನ್ನು ತಮ್ಮದಾಗಿಸಿಕೊಂಡರು. ಮೂರನೇ ಸೆಟ್‌ನಲ್ಲಿ ಎದುರಾಳಿ ಸ್ವಲ್ಪ ಪ್ರತಿರೋಧ ತೋರಿದರೂ ಫೆಡರರ್ ಅವರನ್ನು ಮಣಿಸಲು ಆಗಲಿಲ್ಲ.

ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೆಡರರ್‌, ಆಸ್ಟ್ರೇಲಿಯಾದ ಜಾನ್‌ ಮಿಲ್‌ಮನ್‌ ಅವರನ್ನು ಎದುರಿಸುವರು. ಕಜಕಸ್ತಾನದ ಮಿಖಾಯಲ್‌ ಕುಕುಶ್ಕಿನ್‌ ಅವರನ್ನು 6–4, 4–6, 6–1, 6–3ರಿಂದ ಮಣಿಸಿದ ಮಿಲ್‌ಮನ್‌ ಇದೇ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ 16ರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು.

ನಾಲ್ಕು ತಾಸುಗಳ ಹಣಾಹಣಿ: ಕ್ರೊವೇಷ್ಯಾದ ಮರಿನ್ ಸಿಲಿಕ್ ಮತ್ತು ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾರ್‌ ಅವರು ನಾಲ್ಕು ತಾಸು ಕಾದಾಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಅಂತಿಮವಾಗಿ ಸಿಲಿಕ್ 4–6, 3–6, 6–3, 6–4, 7–5ರಿಂದ ಗೆದ್ದರು.

‘ಅವರು ಅಪ್ರತಿಮ ಹೋರಾಟಗಾರ. ಪಂದ್ಯದ ಪ್ರತಿ ಹಂತದಲ್ಲೂ ಛಲದಿಂದ ಕಾದಾಡಿ ಗೆಲುವಿಗಾಗಿ ಶ್ರಮಿಸಿದರು’ ಎಂದು ಪಂದ್ಯದ ನಂತರ ಸಿಲಿಕ್ ಹೇಳಿದರು.

ಟೂರ್ನಿಯಲ್ಲಿ ಪಾರುಪತ್ಯ ಮುಂದುವರಿಸಿದ ನೊವಾಕ್ ಜೊಕೊವಿಚ್‌ 6–2, 6–3, 6–3ರಿಂದ ರಿಚರ್ಡ್‌ ಗ್ಯಾಸ್ಕೆಟ್ ಅವರನ್ನು ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಕೆರ್ಬರ್‌ಗೆ ನಿರಾಸೆ: 2016ರಲ್ಲಿ ಅಮೆರಿಕ ಓಪನ್‌ ಚಾಂಪಿಯನ್‌ ಆಗಿದ್ದ ಏಂಜಲಿಕ್ ಕರ್ಬರ್‌ ಈ ಬಾರಿ ನಿರಾಸೆ ಕಂಡರು. ಸ್ಲೊವಾಕಿಯಾದ ಡಾಮಿನಿಕಾ ಸಿಬುಲ್ಕೋವ ಎದುರು ಅವರು 6–3, 3–6, 3–6ರಿಂದ ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !