ಬುಧವಾರ, ಅಕ್ಟೋಬರ್ 28, 2020
20 °C

ನಡಾಲ್ ಫ್ರೆಂಚ್ ಓಪನ್ 'ದೊರೆ'

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಸ್ಪೇನ್‌ನ ರಫೆಲ್‌ ನಡಾಲ್‌ 13ನೇ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಚಾಂಪಿಯನ್‌ ಆದರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು 6–0, 6–2, 7–5ರಿಂದ ನೊವಾಕ್ ಜೊಕೊವಿಚ್‌ ಅವರಿಗೆ ಸೋಲುಣಿಸಿದರು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌ ಅವರು ಈ ಗೆಲುವಿನೊಂದಿಗೆ ಸ್ವಿಟ್ಜರ್ಲೆಂಡ್‌ ದಿಗ್ಗಜ ರೋಜರ್‌ ಫೆಡರರ್‌ ಅವರ 20 ಗ್ರ್ಯಾನ್‌ಸ್ಲಾಂ ಜಯದ ದಾಖಲೆಯನ್ನು ಸರಿಗಟ್ಟಿದರು. 34 ವರ್ಷದ ನಡಾಲ್‌ ಅವರಿಗೆ ಇದು ಫ್ರೆಂಚ್‌ ಓಪನ್‌ನಲ್ಲಿ ಅವರ ನೂರನೇ ಗೆಲುವು ಆಗಿದ್ದು ಮತ್ತೊಂದು ವಿಶೇಷ. 2005ರಿಂದ ಅವರು ಇಲ್ಲಿ ಎರಡು ಪಂದ್ಯಗಳನ್ನು ಮಾತ್ರ ಸೋತಿದ್ದಾರೆ. ಫೈನಲ್‌ ಪಂದ್ಯದಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದೆ ನಡಾಲ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಟಿಮಿಯಾ– ಕ್ರಿಸ್ಟಿನಾಗೆ ಪ್ರಶಸ್ತಿ: ಹಂಗ ರಿಯ ಟಿಮಿಯಾ ಬಾಬೋಸ್‌ ಹಾಗೂ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಚ್‌ ಜೋಡಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. 6–4, 7–5ರಿಂದ ಅಲೆಕ್ಸಾ ಗುವಾರಚಿ–ದೇಸಿರಾ ಕ್ರಾಜಿಕ್‌ ಜೋಡಿಯನ್ನು ಅವರು ಮಣಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು