ಶನಿವಾರ, ಜನವರಿ 28, 2023
24 °C

ಟೆನಿಸ್: ಅಮೆರಿಕ ತಂಡಕ್ಕೆ ಯನೈಟೆಡ್‌ ಕಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಅಮೆರಿಕ ತಂಡದವರು ಇದೇ ಮೊದಲ ಬಾರಿ ನಡೆದ ಯುನೈಟೆಡ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಫೈನಲ್‌ನಲ್ಲಿ ಅಮೆರಿಕ 3–0 ರಲ್ಲಿ ಇಟಲಿ ವಿರುದ್ಧ ಗೆದ್ದಿತು.

ಭಾನುವಾರ ನಡೆದ ಮೂರನೇ ಸಿಂಗಲ್ಸ್‌ನಲ್ಲಿ ವಿಶ್ವದ ಒಂಬತ್ತನೇ ರ‍್ಯಾಂಕ್‌ನ ಆಟಗಾರ ಟೇಲರ್‌ ಫ್ರಿಟ್ಜ್‌ 7–6, 7–6 ರಲ್ಲಿ ಇಟಲಿಯ ಮಟೆಯೊ ಬೆರೆಟಿನಿ ಅವರನ್ನು ಮಣಿಸಿದರು.

ಮೊದಲ ಸಿಂಗಲ್ಸ್‌ನಲ್ಲಿ ಜೆಸ್ಸಿಕಾ ಪೆಗುಲಾ ಅವರು 6–4, 6–2 ರಲ್ಲಿ ಮಾರ್ಟಿನಾ ಟ್ರೆವಿಸನ್‌ ವಿರುದ್ಧ ಗೆದ್ದು ಅಮೆರಿಕಕ್ಕೆ 1–0 ರಲ್ಲಿ ಮುನ್ನಡೆ ತಂದುಕೊಟ್ಟಿದ್ದರು. ಎರಡನೇ ಪಂದ್ಯದಲ್ಲಿ ಅಮೆರಿಕದ ಫ್ರಾನ್ಸೆಸ್‌ ಟೈಫೊ 6–2 ರಲ್ಲಿ ಲೊರೆನ್ಜೊ ಮುಸೆಟಿ ಎದುರು ಮುನ್ನಡೆ ಸಾಧಿಸಿದ್ದರು. ಈ ವೇಳೆ ಭುಜದ ಗಾಯದಿಂದ ಮುಸೆಟಿ ಹಿಂದೆ ಸರಿದರು. ಇದರಿಂದ ಅಮೆರಿಕ 2–0 ರಲ್ಲಿ ಮುನ್ನಡೆ ಗಳಿಸಿತು.

ಪ್ರಶಸ್ತಿಯ ಕನಸನ್ನು ಜೀವಂತವಾರಿಸಿಕೊಳ್ಳಲು ಮೂರನೇ ಪಂದ್ಯದಲ್ಲಿ ಇಟಲಿಗೆ ಗೆಲುವು ಅನಿವಾರ್ಯವಾಗಿತ್ತು. ಬೆರೆಟಿನಿ ಅವರು ಫ್ರಿಟ್ಜ್‌ಗೆ ಪ್ರಬಲ ಪೈಪೋಟಿ ನೀಡಿದರಾದರೂ, ಗೆಲುವು ದಕ್ಕಲಿಲ್ಲ.

ಚೊಚ್ಚಲ ಯುನೈಟೆಡ್‌ ಕಪ್‌ ಟೂರ್ನಿಯಲ್ಲಿ 18 ರಾಷ್ಟ್ರಗಳ ತಂಡಗಳು ಪಾಲ್ಗೊಂಡಿದ್ದವು. ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಟೂರ್ನಿಯ ಪಂದ್ಯಗಳು ಪರ್ತ್‌, ಬ್ರಿಸ್ಬೇನ್‌ ಮತ್ತು ಸಿಡ್ನಿಯಲ್ಲಿ ಆಯೋಜನೆಯಾಗಿದ್ದವು.

ಸೆಮಿಫೈನಲ್‌ನಲ್ಲಿ ಅಮೆರಿಕ 5–0 ರಲ್ಲಿ ಪೋಲೆಂಡ್‌ ತಂಡವನ್ನು ಮಣಿಸಿದ್ದರೆ, ಇಟಲಿ ತಂಡ 4–1 ರಲ್ಲಿ ಗ್ರೀಸ್‌ ವಿರುದ್ಧ ಗೆದ್ದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು