ಮಂಗಳವಾರ, ಜೂನ್ 28, 2022
22 °C
ಸಸ್ನೊವಿಚ್‌ ಎದುರು ಕರ್ಬರ್‌ಗೆ ಸೋಲು: ಕೊಕೊ ಗಫ್‌ಗೆ ಮಣಿದ ಕನೆಪಿ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ನಡಾಲ್‌ಗೆ 300ನೇ ಗೆಲುವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕೆ ಇಳಿದಿರುವವರ ಪೈಕಿ ಅತಿ ಹೆಚ್ಚು ವಯಸ್ಸಿನ ಆಟಗಾರ್ತಿ ಕಯಾ ಕನೆಪಿ ವಿರುದ್ಧ ಜಯ ಗಳಿಸಿದ ಯುವ ಟೆನಿಸ್ ಪಟು ಕೊಕೊ ಗಫ್‌ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಅಮೆರಿಕದ 18 ವಯಸ್ಸಿನ ಕೊಕೊ ಗಫ್‌ 36ರ ಹರೆಯದ ಎಸ್ಟೋನಿಯಾದ ಕನೆಪಿ ಅವರನ್ನು 6-3, 6-4ರಲ್ಲಿ ಸೋಲಿಸಿದರು. 18ನೇ ಶ್ರೇಯಾಂಕದ ಕೊಕೊ ಗಫ್‌ ಸತತ ಎರಡನೇ ವರ್ಷ 16ರ ಘಟ್ಟ ಪ್ರವೇಶಿಸಿದರು.

ಮುಚೋವಗೆ ಗಾಯ; ಅಮಾಂಡ ಮುನ್ನಡೆ
ಜೆಕ್ ಗಣರಾಜ್ಯದ ಕರೋಲಿನಾ ಮುಚೋವ ಮೂರನೇ ಸುತ್ತಿನ ಪಂದ್ಯದ ಮೂರನೇ ಸೆಟ್‌ನಲ್ಲಿ ಹಿಮ್ಮಡಿ ನೋವಿನಿಂದ ಬಳಲಿ ನಿವೃತ್ತಿ ಘೋಷಿಸಿದ ಕಾರಣ ಎದುರಾಳಿ ಅಮೆರಿಕದ ಅಮಾಂಡ ಅನಿಸಿಮೊವ ಮುಂದಿನ ಹಂತಕ್ಕೆ ಪ್ರವೇಶಿಸಿದರು. ಮೊದಲ ಸೆಟ್‌ನಲ್ಲಿ ಅಮೋಘ ಆಟದ ಮೂಲಕ ಗಮನ ಸೆಳೆದ ಮುಚೋವ 7–6ರಲ್ಲಿ ಜಯ ಸಾಧಿಸಿದ್ದರು. ಆದರೆ ಎರಡನೇ ಸೆಟ್‌ನಲ್ಲಿ 2–6ರ ಹಿನ್ನಡೆ ಕಂಡರು. ನಿರ್ಣಾಯಕ ಸೆಟ್‌ನಲ್ಲಿ 0–3ಯಿಂದ ಹಿನ್ನಡೆ ಅನುಭವಿಸಿದ್ದ ವೇಳೆ ನಿವೃತ್ತರಾದರು.

ನಡಾಲ್‌ಗೆ 300ನೇ ಗೆಲುವು
ಸ್ಪೇನ್‌ನ ರಫೆಲ್ ನಡಾಲ್ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 300ನೇ ಜಯ ಸಾಧಿಸುವ ಮೂಲಕ ಟೂರ್ನಿಯ 3ನೇ ಸುತ್ತು ಪ್ರವೇಶಿಸಿದರು. ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಕೂಡ 3ನೇ ಸುತ್ತಿಗೆ ಲಗ್ಗೆ ಇರಿಸಿದರು. 

ಸ್ಥಳೀಯ ಆಟಗಾರ ಕೊರೆಂಟಿನ್ ಮೌಟೆಟ್‌ ವಿರುದ್ಧ ನಡಾಲ್ 6-3, 6-1, 6-4ರಲ್ಲಿ ಜಯ ಗಳಿಸಿದರೆ ಜೊಕೊವಿಚ್ 6-2, 6-3, 7-6 (7/4)ರಲ್ಲಿ ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕಾನ್‌ಗೆ ಸೋಲುಣಿಸಿದರು.

ಮೂರನೇ ಸುತ್ತಿನ ಫಲಿತಾಂಶಗಳು: ಪುರುಷರು: ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮ್ಯಾನ್‌ಗೆ ಬಲ್ಗೇರಿಯಾದ ಗ್ರಿಗರ್ ದಿಮಿಟ್ರೊವ್‌ ವಿರುದ್ಧ 6-3, 6-1, 6-2ರಲ್ಲಿ ಜಯ.

ಮಹಿಳೆಯರ ವಿಭಾಗ: ಬೆಲಾರಸ್‌ನ ಅಲೆಕ್ಸಾಂಡ್ರ ಸಾಸ್ನೊವಿಚ್‌ಗೆ ಜರ್ಮನಿಯ ಏಂಜಲಿಕ್ ಕರ್ಬರ್ ವಿರುದ್ಧ 6-4, 7-6 (7/5)ರಲ್ಲಿ ಗೆಲುವು; ಅಮೆರಿಕದ ಕೊಕೊ ಗಫ್‌ಗೆ ಎಸ್ಟೋನಿಯಾದ ಕಯಾ ಕನೇಪಿ ವಿರುದ್ಧ 6-3, 6-4ರಲ್ಲಿ ಜಯ; ಇಟಲಿಯ ಮಾರ್ಟಿನಾ ಟ್ರೆವಿಸನ್‌ಗೆ ಆಸ್ಟ್ರೇಲಿಯಾದ ದಾರಿಯಾ ಸೆವಿಲ್ಲೆ ವಿರುದ್ಧ 6-3, 6-4ರಲ್ಲಿ, ಕೆನಡಾದ ಲೈಲಾ ಫರ್ನಾಂಡಜ್‌ಗೆ ಸ್ವಿಟ್ಜರ್ಲೆಂಡ್‌ನ ಬೆಲಿಂದಾ ಬೆನ್ಸಿಕ್‌ ಎದುರು 7-5, 3-6, 7-5ರಲ್ಲಿ, ಅಮೆರಿಕದ ಅಮಾಂಡ ಅನಿಸಿಮೊವಗೆ ಜೆಕ್ ಗಣರಾಜ್ಯದ ಕರೋಲಿನಾ ಮುಚೋವ ವಿರುದ್ಧ 6-7 (7/9), 6-2, 3-0 (ನಿವೃತ್ತಿ)ರಲ್ಲಿ, ಬೆಲಾರಸ್‌ನ ಎಲಿಸ್ ಮರ್ಟೆನ್ಸ್‌ಗೆ ರಷ್ಯಾದ ವರ್ವರಾ ಗಚೇವ ವಿರುದ್ಧ 6-2, 6-3ರಲ್ಲಿ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು