ಶನಿವಾರ, ಮೇ 30, 2020
27 °C

ಕೊರೊನಾ ವಿರುದ್ಧ ಸಮರ: ₹1.25 ಕೋಟಿ ಸಂಗ್ರಹಿಸಿದ ಸಾನಿಯಾ ಮಿರ್ಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಕೊರೊನಾ ವೈರಸ್ ತಡೆಗೆ  ದೇಶದಲ್ಲಿ ಹಾಕಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಲು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಹೋದ ಒಂದು ವಾರದಿಂದ ಸ್ವಸೇವಾ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದಾರೆ. ಈ ಹಂತದಲ್ಲಿ ಇಅವರು ವಿವಿಧ ಮೂಲಗಳಿಂದ ₹ 1.25 ಕೋಟಿ ಸಂಗ್ರಹಿಸಿದ್ದು, ಸುಮಾರು ಒಂದು ಲಕ್ಷ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. 

"ಕಳೆದ ವಾರ ನಮ್ಮ ತಂಡವು ಸಂಕಷ್ಟಕ್ಕೆ ಸಿಲುಕಿರುವವರಿಗೆ  ಸಹಾಯ ಮಾಡಿತ್ತು. ಹಲವು ಕುಟುಂಬಗಳಿಗೆ ಆಹಾರ ಪೂರೈಕೆ ಮಾಡಿದ್ದೆವು. ಇದೀಗ ಒಂದೇ ಒಂದು ವಾರದಲ್ಲಿ ₹ 1.25 ಕೋಟಿ  ಸಂಗ್ರಹವಾಗಿದೆ. ಇದರಲ್ಲಿ ಒಂದು ಲಕ್ಷ ಜನರಿಗೆ ಸಹಾಯ ಮಾಡಬಹುದು. ನಾವೆಲ್ಲರೂ ಜೊತೆಯಲ್ಲಿದ್ದೇವೆ. ಅಗತ್ಯವುಳ್ಳವರಿಗೆ ಸಹಾಯ ಮಾಡಲು ಕಟಿಬದ್ಧರಾಗಿದ್ದೇವೆ’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ. 

ಯೂಥ್‌ಫೀಡ್‌ಇಂಡಿಯಾ@ಸೇಫ್‌ಇಂಡಿಯಾ ಸಂಸ್ಥೆಯ ಕಾರ್ಯಕರ್ತರೊಂದಿಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು