ಮಂಗಳವಾರ, ಏಪ್ರಿಲ್ 7, 2020
19 °C

ಡೇವಿಸ್‌ ಕಪ್‌: ವಿಶ್ವ ಗುಂಪಿನ ಪಂದ್ಯದಲ್ಲಿ ಭಾರತಕ್ಕೆ ಫಿನ್ಲೆಂಡ್‌ ತಂಡ ಎದುರಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ತಂಡ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಗುಂಪಿನ ಪಂದ್ಯದಲ್ಲಿ ಫಿನ್ಲೆಂಡ್‌ ತಂಡವನ್ನು ಎದುರಿಸಲಿದೆ. 

ಇತ್ತೀಚೆಗೆ ನಡೆದ ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್‌ ಹಣಾಹಣಿಯಲ್ಲಿ ಭಾರತ 1–3 ಅಂತರದಿಂದ ಕ್ರೊವೇಷ್ಯಾ ತಂಡಕ್ಕೆ ಮಣಿದಿತ್ತು.

ಇನ್ನೊಂದೆಡೆ ವಿಶ್ವ ಗುಂಪಿನ ಪ್ಲೇ ಆಫ್‌ ಹಂತದ ಪಂದ್ಯದಲ್ಲಿ ಫಿನ್ಲೆಂಡ್‌ 3–2 ರಿಂದ ಮೆಕ್ಸಿಕೊ ಮೇಲೆ ಜಯ ಗಳಿಸಿತ್ತು.‌ 

ಭಾರತಕ್ಕೆ ಈಗ ಫಿನ್ಲೆಂಡ್‌ ಎದುರಾ ಳಿಯಾಗಿರುವುದು ಒಂದು ರೀತಿ ಅನುಕೂಲವೇ ಆಗಿದೆ. ಯಾಕೆಂದರೆ ಈ ದ್ವೀಪ ರಾಷ್ಟ್ರದ ತಂಡದಲ್ಲಿ ವಿಶ್ವದ ಅಗ್ರ 100ರಲ್ಲಿ ಸ್ಥಾನ ಗಳಿಸಿರುವ ಆಟಗಾರರು ಯಾರೂ ಇಲ್ಲ.

ಎಮಿಲ್‌ ರುಸುವೊರಿ 101ನೇ ಕ್ರಮಾಂಕ ಪಡೆದಿದ್ದು, ಅಲ್ಲಿನ ಅಗ್ರಮಾನ್ಯ ಆಟಗಾರ ಎನಿಸಿದ್ದಾರೆ. ಹೆನ್ರಿ ಕೊಂಟಿನೆನ್‌ ಅವರು ಡಬಲ್ಸ್‌ನಲ್ಲಿ 30ನೇ ಸ್ಥಾನದಲ್ಲಿದ್ದಾರೆ.

ಸೆಪ್ಟೆಂಬರ್‌ 18 ಅಥವಾ 19ರಂದು ಆರಂಭವಾಗುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಡೇವಿಸ್‌ ಕಪ್‌ ಕ್ವಾಲಿಫೈಯರ್ಸ್‌ನಲ್ಲಿ ಆಡುವ ಅರ್ಹತೆ ಪಡೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು