ನವದೆಹಲಿ: ಬೆನ್ನುನೋವು ಇರುವುದಾಗಿ ಹೇಳಿ ಕಳೆದ ವಾರ ಸ್ವೀಡನ್ ವಿರುದ್ಧ ಡೇವಿಸ್ ಕಪ್ ವಿಶ್ವ ಗುಂಪಿನ (1) ಪಂದ್ಯದಿಂದ ಹಿಂದೆಸರಿದಿದ್ದ ದೇಶದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಈಗ ಚೀನಾದಲ್ಲಿ ಎಟಿಪಿ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ. ‘ಅವರು ಡೇವಿಸ್ ಕಪ್ ಪಂದ್ಯವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿರಬಹುದು’ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ ಮಂಗಳವಾರ ಹೇಳಿದೆ.

ಸ್ಟಾಕ್ಹೋಮ್ನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ 0–4 ರಿಂದ ಸ್ವೀಡನ್ ಕೈಲಿ ಮುಖಭಂಗ ಅನುಭವಿಸಿತ್ತು. ನಗಾಲ್, ಯುಕಿ ಭಾಂಬ್ರಿ ಅನುಪಸ್ಥಿತಿಯಲ್ಲಿ ಡಬಲ್ಸ್ ಆಟಗಾರನನ್ನು ಸಿಂಗಲ್ಸ್ಗೆ ಆಡಿಸಬೇಕಾದ ದುಃಸ್ಥಿತಿಯನ್ನು ಭಾರತ ಎದುರಿಸಿತ್ತು.

‘ಸುಮಿತ್ ಮತ್ತು ಯುಕಿ ಆಡಿದ್ದಲ್ಲಿ ನಮಗೆ ಗೆಲ್ಲುವ ಅವಕಾಶಗಳು ಹೆಚ್ಚಿರುತ್ತಿತ್ತು. ಅವರು ಐಎಟಿಎ ಆಡಳಿತ, ನಾಯಕ ಮತ್ತು ತಂಡವನ್ನು ಪ್ರಶ್ನಿಸಿದ್ದಾರೆ. ಬೆನ್ನು ನೋವೆಂದು ಹೇಳಿದ್ದ ನಗಾಲ್ ಹೇಳಿದ್ದರು. ಈಗ ಆ ಸಮಸ್ಯೆ ಸರಿಯಾಗಿದೆಯೇ? ಅವರು ಚೀನಾದಲ್ಲಿ ಟೂರ್ನಿ ಆಡುತ್ತಿದ್ದಾರೆ. ಜನರಿಗೆ ಯಾವುದು ಸರಿ ಎಂದು ಯಾರಾದರೂ ಅರ್ಥ ಮಾಡಿಸಬೇಕು’ ಎಂದು ಎಐಟಿಎ ಕಾರ್ಯದರ್ಶಿ ಅನಿಲ್ ಧುಪರ್ ವ್ಯಂಗ್ಯವಾಗಿ ಹೇಳಿದ್ದಾರೆ.

ಪ್ರಮುಖ ಆಟಗಾರ ಮುಕುಂದ್ ಶಶಿಕುಮಾರ್ ಈಗಾಗಲೇ ಎಐಟಿಎನಿಂದ ಅಮಾನತಿಗೆ ಒಳಗಾಗಿರುವ ಬಗ್ಗೆ ಕೇಳಿದಾಗ, ‘ನಾಯಕ ರೋಹಿತ್ ರಾಜಪಾಲ್ ಅವರು, ಶಶಿಕುಮಾರ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲು ಯತ್ನಿಸಿದ್ದರು. ಸುಮಾರು 10 ಸಲ ಕರೆ ಮಾಡಿದ್ದರು. ಅಮಾನತು ವಾಪಸು ಪಡೆಯಲು ಯತ್ನಿಸುವುದಾಗಿಯೂ ಕರೆ ಮಾಡಿ ಹೇಳಿದ್ದರು. ಆದರೆ ಅವರು (ಆಟಗಾರ) ನಿರಾಕರಿಸಿದರು’ ಎಂದು ಅವರು ಹೇಳಿದರು.

ಭಾರತ ಡೇವಿಸ್ ಕಪ್ ಪಂದ್ಯದಲ್ಲಿ ಹೀನಾಯವಾಗಿ ಸೋತ ನಂತರ ಸೋಮ ದೇವ್ ದೇವ್ವರ್ಮನ್ ಮತ್ತು ಪುರವ್ ರಾಜಾ ಅವರು ಎಐಟಿಎ ಕಾರ್ಯವೈಖರಿ ಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.