ಭಾನುವಾರ, ಏಪ್ರಿಲ್ 11, 2021
32 °C

ಶರಪೊವಾ ಕ್ಷಮೆ ಯಾಚಿಸಿದ ಕೇರಳೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ‘ಭಾರತದ ಸಾರ್ವಭೌಮತ್ವದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ, ಹೊರಗಿನವರು ಪ್ರೇಕ್ಷಕರಾಗಬಹುದೇ ವಿನಾ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವಂತಿಲ್ಲ’ ಎಂದು ಸಚಿನ್‌ ತೆಂಡೂಲ್ಕರ್‌ ಮಾಡಿದ್ದ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇರಳೀಯರು ಟೆನಿಸ್‌ ತಾರೆ ಮರಿಯಾ ಶರಪೊವಾ ಅವರ ಕ್ಷಮೆ ಯಾಚಿಸಿದ್ದಾರೆ.

2015ರಲ್ಲಿ ‘ತೆಂಡೂಲ್ಕರ್‌ ಯಾರು ಎಂದು ನನಗೆ ಗೊತ್ತಿಲ್ಲ’ ಎಂದು ಶರಪೊವಾ ಹೇಳಿದ್ದರು. ಆ ಸಂದರ್ಭದಲ್ಲಿ ಕೇರಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಶರಪೊವಾ ಅವರನ್ನು ಟ್ರೋಲ್‌ ಮಾಡಿ, ಭಾರತೀಯರ ಕ್ಷಮೆಯಾಚಿಸಬೇಕು’ ಎಂದು ಟ್ವಿಟರ್‌ ಮೂಲಕ ಒತ್ತಾಯಿಸಿದ್ದರು.

ಆ ಕೃತ್ಯಕ್ಕೆ ಕೇರಳೀಯರು ಈಗ ಕ್ಷಮೆ ಯಾಚಿಸಿದ್ದಾರೆ. ಕೆಲವರಂತೂ ದೇವರ ಸ್ವಂತ ನಾಡು ಕೇರಳಕ್ಕೆ ಭೇಟಿ ನೀಡುವಂತೆ ಶರಪೋವಾ ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಅನೇಕ ಟ್ವೀಟ್‌ ಗಳನ್ನು ಮಲಯಾಳ ಭಾಷೆಯಲ್ಲೇ ಬರೆಯಲಾಗಿದೆ. ಇತರ ಭಾಷೆಗಳಲ್ಲೂ ಟ್ವೀಟ್‌ಗಳನ್ನು ಮಾಡಲಾಗಿದೆ.

‘ಶರಪೊವಾ ಅವರೇ, ಸಚಿನ್‌ ಬಗ್ಗೆ ನೀವು ಹೇಳಿದ್ದು ಸರಿ. ಅವರು ನೀವು ನೆನಪಿಟ್ಟುಕೊಳ್ಳಬಹುದಾದ ಗುಣ ಮಟ್ಟದ ವ್ಯಕ್ತಿ ಅಲ್ಲ’ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು