ಗುರುವಾರ , ಏಪ್ರಿಲ್ 9, 2020
19 °C

ಶರಪೋವಾ ಗುಡ್‌ಬೈ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್ : ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ ವೃತ್ತಿಪರ ಟೆನಿಸ್‌ಗೆ ಬುಧವಾರ ವಿದಾಯ ಘೋಷಿಸಿದ್ದಾರೆ.

2001ರಲ್ಲಿ ಪದಾರ್ಪಣೆ ಮಾಡಿದ್ದ ಅವರು  ಐದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರಷ್ಯಾದ ಶರಪೋವಾ 2004ರಲ್ಲಿಯೇ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದರು. 2005 ಅಗ್ರಶ್ರೇಯಾಂಕ ಕೂಡ ಗಳಿಸಿದ್ದರು. 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಆದರೆ, 2016ರಲ್ಲಿ ನಿಷೇಧಿತ ಮದ್ದು ಮೆಲ್ಡೊನಿಯಂ ಸೇವನೆ ಆರೋಪದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ್ದರು. 2017ರಲ್ಲಿ ಕಣಕ್ಕೆ ಮರಳಿದ್ದ ಅವರು ಹೆಚ್ಚು ಸಫಲರಾಗಿರಲಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು