ರೋಮ್: ಸ್ಪೇನ್ನ ರಫೆಲ್ ನಡಾಲ್ ಅವರು ರೋಮ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು. ಒಂಬತ್ತು ಬಾರಿಯ ಚಾಂಪಿಯನ್ ನಡಾಲ್ ಕ್ವಾರ್ಟರ್ ಫೈನಲ್ನಲ್ಲಿ 6-3, 6-4ರಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಎದುರು ಜಯ ಸಾಧಿಸಿದರು. ಈ ಮೂಲಕ ಕಳೆದ ವಾರ ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿದರು.

ಮೊದಲ ಸೆಟ್ನ ಆರಂಭದಲ್ಲಿ 4–0ಯಿಂದ ನಡಾಲ್ ಮುನ್ನಡೆದಿದ್ದರು. ನಂತರ ಜ್ವೆರೆವ್ ತಿರುಗೇಟು ನೀಡಿದರು. ಆದರೂ ಪಟ್ಟು ಬಿಡದೆ ಹೋರಾಡಿದ ನಡಾಲ್ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್ನ ಆರಂಭದಲ್ಲಿ ಜರ್ಮನಿ ಆಟಗಾರ ಮುನ್ನಡೆದರು. ಆದರೆ ಜಯ ಗಳಿಸಲು ಸಾಧ್ಯವಾಗಲಿಲ್ಲ.

ನಾಲ್ಕರ ಘಟ್ಟದ ಪಂದ್ಯದಲ್ಲಿ ಅಮೆರಿಕದ ರೇಲಿ ಒಪೆಲ್ಕಾ ಅವರನ್ನುನಡಾಲ್ ಎದುರಿಸುವರು. ವಿಶ್ವ ರ್ಯಾಂಕಿಂಗ್ನಲ್ಲಿ 47ನೇ ಸ್ಥಾನದಲ್ಲಿರುವ ಒಪೆಲ್ಕಾ 7-5, 7-6 (7/2)ರಲ್ಲಿ ಅರ್ಜೆಂಟೀನಾದ ಫೆಡರಿಕೊ ಡೆಲ್ಬೊನಿಸ್ ಎದುರು ಜಯ ಗಳಿಸಿ ಮಾಸ್ಟರ್ಸ್ ಟೂರ್ನಿಯೊಂದರಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ಫೆಡರಿಕೊ ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತು ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.