ಶನಿವಾರ, ಜೂನ್ 19, 2021
21 °C
ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿ: ಸಿಟ್ಸಿಪಾಸ್‌ಗೆ ಮುನ್ನಡೆ

ರಫೆಲ್ ನಡಾಲ್‌ಗೆ ಮಣಿದ ನಿಶಿಕೋರಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಾರ್ಸಿಲೋನಾ: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ರಫೆಲ್ ನಡಾಲ್ ಅವರು ಕೀ ನಿಶಿಕೋರಿ ಅವರನ್ನು ಮಣಿಸಿ ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಇಲ್ಲಿ 11ನೇ ಬಾರಿ ಪ್ರಶಸ್ತಿ ಜಯಿಸಿರುವ ಸ್ಪೇನ್‌ನ ನಡಾಲ್, 6-0, 2-6, 6-2ರಿಂದ ಜಪಾನ್ ಆಟಗಾರರನ್ನು ಸೋಲಿಸಿದರು.

ಮೊದಲ ಸೆಟ್‌ಅನ್ನು ಸುಲಭವಾಗಿ ಗೆದ್ದ ನಡಾಲ್‌ ಅವರಿಗೆ ತಿರುಗೇಟು ನೀಡಿದ ನಿಶಿಕೋರಿ, ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದರು. ನಿರ್ಣಾಯಕ ಸೆಟ್‌ನಲ್ಲಿ ಸ್ಪೇನ್ ಆಟಗಾರ ಎರಡು ಬಾರಿ ನಿಶಿಕೋರಿಯ ಸರ್ವ್ ಮುರಿದರು. ಸೆಟ್‌ನೊಂದಿಗೆ ಪಂದ್ಯವನ್ನೂ ಗೆದ್ದು ಬೀಗಿದರು.

ಮಾಂಟೆ ಕಾರ್ಲೊ ಓಪನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಆ್ಯಂಡ್ರೆ ರುಬ್ಲೆವ್ ಎದುರು ಎಡವಿದ್ದ ನಡಾಲ್‌, ಇಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದ್ದಾರೆ.

ಎಂಟರಘಟ್ಟದ ಪಂದ್ಯದಲ್ಲಿ ನಡಾಲ್ ಅವರಿಗೆ ಬ್ರಿಟನ್‌ನ ಕ್ಯಾಮರಾನ್‌ ನೊರಿ ಸವಾಲು ಎದುರಾಗಿದೆ.

ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ, ಎರಡನೇ ಶ್ರೇಯಾಂಕದ ಸ್ಟೆಫನೋಸ್ ಸಿಟ್ಸಿಪಾಸ್‌ ಅವರು 7-5, 6-3 ಅಲೆಕ್ಸ್ ಡಿ ಮಿನೌರ್ ಅವರನ್ನು ಪರಾಭವಗೊಳಿಸಿದರು. ಮತ್ತೊಂದು ಪಂದ್ಯದಲ್ಲಿ ರುಬ್ಲೆವ್‌ 6-4, 6-7, 6-4ರಿಂದ ಆಲ್ಬರ್ಟ್‌ ರಾಮೋಸ್ ವಿನೊಲಾಸ್ ಎದುರು ಜಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.