ಬುಧವಾರ, ನವೆಂಬರ್ 13, 2019
23 °C

ಡೇವಿಸ್‌ ಕಪ್‌ ಕಣಕ್ಕೆ ನಡಾಲ್‌

Published:
Updated:
Prajavani

ಮ್ಯಾಡ್ರಿಡ್‌: ವಿಶ್ವದ ಎರಡನೇ ರ‍್ಯಾಂಕಿನ ಆಟಗಾರ ರಫೆಲ್‌ ನಡಾಲ್‌, ಸ್ಪೇನ್‌ನ ಡೇವಿಸ್‌ ಕಪ್‌ ಟೆನಿಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ತಿಂಗಳು ಮ್ಯಾಡ್ರಿಡ್‌ನಲ್ಲಿ ಟೂರ್ನಿ ನಡೆಯಲಿದೆ.

ನಡಾಲ್‌ ಜೊತೆಗೆ ರಾಬರ್ಟೊ ಬೌಟಿಸ್ಟಾ ಅಗುಟ್‌, ಪ್ಯಾಬ್ಲೊ ಕ್ಯಾರೆನೊ, ಫೆಲಿಸಿಯಾನೊ ಲೊಪೆಜ್‌ ಮತ್ತು ಮಾರ್ಸೆಲ್‌ ಗ್ರ್ಯಾನೊಲರ್ಸ್ ಕೂಡ ತಂಡದಲ್ಲಿದ್ದಾರೆ. ಸೆರ್ಜಿ ಬ್ರುಕ್ವೆರಾ ‌ಈ ತಂಡದ ಕೋಚ್‌.

ಮಣಿಕಟ್ಟು ಗಾಯದ ಕಾರಣ ನಡಾಲ್‌ ಅವರು ಶಾಂಘೈ ಮಾಸ್ಟರ್ಸ್ ಟೂರ್ನಿಯಲ್ಲಿ ಆಡಿರಲಿಲ್ಲ.

ಡೇವಿಸ್‌ ಕಪ್‌ ಟೂರ್ನಿಯಲ್ಲಿ ಸ್ಪೇನ್‌ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ರಷ್ಯಾ ಹಾಗೂ ಕ್ರೊವೇಷ್ಯಾ ಕೂಡ ಇದೇ ಗುಂಪಿನಲ್ಲಿವೆ. ಟೂರ್ನಿಯು ನವಂಬರ್‌ 18ರಿಂದ ನಡೆಯಲಿದೆ.

 

 

ಪ್ರತಿಕ್ರಿಯಿಸಿ (+)