ಪ್ಯಾರಿಸ್: ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ಮತ್ತು ಎರಡನೇ ಸ್ಥಾನದ ರಫೆಲ್ ನಡಾಲ್ ನಡುವಿನ ಹಣಾಹಣಿಗೆ ರೋಲೆಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಣ ಸಜ್ಜುಗೊಂಡಿದೆ.

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯ ಭಾನುವಾರ ಸಂಜೆ ನಡೆಯಲಿದ್ದು ಸ್ಪೇನ್‌ನ ನಡಾಲ್ ಈ ಟೂರ್ನಿಯಲ್ಲಿ 13ನೇ ಪ್ರಶಸ್ತಿಯ ಬೆನ್ನುಹತ್ತಿದ್ದಾರೆ. ಫೈನಲ್‌ನಲ್ಲಿ ಗೆಲುವು ಸಾಧಿಸಿದರೆ 20ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಅವರ ಮುಡಿಗೇರಲಿದ್ದು ಅತಿಹೆಚ್ಚು ಪ್ರಶಸ್ತಿ ಗಳಿಸಿದ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ 100ನೇ ಪಂದ್ಯ ಗೆದ್ದ ಸಾಧನೆಯೂ ಅವರದಾಗಲಿದೆ.

ಸರ್ಬಿಯಾದ ಜೊಕೊವಿಚ್ ಫೈನಲ್‌ನಲ್ಲಿ ಗೆದ್ದರೆ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲೂ ಎರಡು ಬಾರಿ ಪ್ರಶಸ್ತಿ ಗೆದ್ದ ಅಪರೂಪದ ದಾಖಲೆ ತಮ್ಮದಾಗಿಸಿಕೊಳ್ಳಲಿದ್ದಾರೆ. 18ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯೂ ಅವರದಾಗಲಿದೆ.

ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನಡಾಲ್ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್ ವಿರುದ್ಧ 6-3, 6-3, 7-6ರಲ್ಲಿ ಜಯ ಗಳಿಸಿದ್ದರು. ಜೊಕೊವಿಚ್ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್ ಎದುರು 6-3, 6-2, 5-7, 4-6, 6-1ರಲ್ಲಿ ಗೆಲುವು ಸಾಧಿಸಿದ್ದರು.

ಈ ಬಾರಿಯ ಟೂರ್ನಿಯುದ್ದಕ್ಕೂ ನಡಾಲ್ ಒಂದು ಸೆಟ್ ಕೂಡ ಸೋತಿಲ್ಲ. 2017ರಲ್ಲಿ ಅವರು ಎಲ್ಲ ಸೆಟ್‌ಗಳನ್ನು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ರೋಲೆಂಡ್ ಗ್ಯಾರೋಸ್‌ನಲ್ಲಿ ನಡಾಲ್ ಮತ್ತು ಜೊಕೊವಿಚ್ ಏಳು ಬಾರಿ ಮುಖಾಮುಖಿಯಾಗಿದ್ದು 2012 ಮತ್ತು 2014ರ ಫೈನಲ್ ಸೇರಿದಂತೆ ಆರು ಬಾರಿ ನಡಾಲ್ ಜಯ ಗಳಿಸಿದ್ದಾರೆ. ಆದರೆ ಕೊನೆಯದಾಗಿ, 2015ರಲ್ಲಿ ಜೊಕೊವಿಚ್‌ಗೆ ಮಣಿದಿದ್ದರು.

ಪಂದ್ಯ ಆರಂಭ: ಸಂಜೆ 6.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ

ಪಂದ್ಯ 55

ಜೊಕೊವಿಚ್ ಜಯ 29

ನಡಾಲ್ ಗೆಲುವು 26

ನೊವಾಕ್ ಜೊಕೊವಿಚ್

ವಯಸ್ಸು 33

ವಿಶ್ವ ರ‍್ಯಾಂಕಿಂಗ್ 1

ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳು 17

ಆಸ್ಟ್ರೇಲಿಯನ್ ಓಪನ್ 8

ವಿಂಬಲ್ಡನ್ 5

ಅಮರಿಕ ಓಪನ್ 3

ಫ್ರೆಂಚ್ ಓಪನ್ 1

ಒಟ್ಟು ಎಟಿಪಿ ಪ್ರಶಸ್ತಿಗಳು 81

ಫ್ರೆಂಚ್ ಓಪನ್ 2019: ಸೆಮಿಫೈನಲ್

ರಫೆಲ್ ನಡಾಲ್

ವಯಸ್ಸು 34

ವಿಶ್ವ ರ‍್ಯಾಂಕಿಂಗ್ 2

ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳು 19

ಫ್ರೆಂಚ್ ಓಪನ್ 12

ಅಮೆರಿಕ ಓಪನ್ 4

ವಿಂಬಲ್ಡನ್ 2

ಆಸ್ಟ್ರೇಲಿಯಾ ಓಪನ್ 1

ಒಟ್ಟು ಎಟಿಪಿ ಪ್ರಶಸ್ತಿಗಳು 85

ಫ್ರೆಂಚ್ ಓಪನ್ 2019: ಚಾಂಪಿಯನ್

ರಫೆಲ್ ನಡಾಲ್ ಫೈನಲ್ ಹಾದಿ

ಮೊದಲ ಸುತ್ತು: ಬೆಲಾರಸ್‌ನ ಎಗರ್ ಗೆರಸಿಮೊವ್ ಎದುರು 6-4, 6-4, 6-2ರಲ್ಲಿ ಜಯ

ಎರಡನೇ ಸುತ್ತು: ಅಮೆರಿಕದ ಮೆಕೆನ್ಸಿ ಮೆಕ್‌ಡೊನಾಲ್ಡ್ ವಿರುದ್ಧ6-1, 6-0, 6-3ರಲ್ಲಿ ಜಯ

ಮೂರನೇ ಸುತ್ತು: ಇಟಲಿಯ ಸ್ಟೆಫನೊ ಟ್ರವಗ್ಲಿಯಾ ಎದುರು6-1, 6-4, 6-0ರಲ್ಲಿ ಜಯ

ನಾಲ್ಕನೇ ಸುತ್ತು: ಅಮೆರಿಕದ ಕೊರ್ಡಾ ಸೆಬಾಸ್ಟಿಯನ್ ವಿರುದ್ಧ6-1, 6-1, 6-2ರಲ್ಲಿ ಜಯ

ಕ್ವಾರ್ಟರ್ ಫೈನಲ್: ಇಟಲಿಯ ಜನಿಕ್ ಸಿನರ್ ಎದುರು7-6, 6-4, 6-1ರಲ್ಲಿ ಜಯ

ಸೆಮಿಫೈನಲ್: ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್ ವಿರುದ್ಧ 6-3, 6-3, 7-6ರಲ್ಲಿ ಜಯ

ನೊವಾಕ್ ಜೊಕೊವಿಚ್ ಫೈನಲ್ ಹಾದಿ

ಮೊದಲ ಸುತ್ತು: ಸ್ವೀಡನ್‌ನ ಮೈಕೆಲ್ ಯೆಮರ್ ವಿರುದ್ಧ6-0, 6-2, 6-3ರಲ್ಲಿ ಜಯ

ಎರಡನೇ ಸುತ್ತು: ಲಿಥುವೇನಿಯಾದ ರಿಕಾರ್ಡಸ್ ವಿರುದ್ಧ 6-1, 6-2, 6-2ರಲ್ಲಿ ಜಯ

ಮೂರನೇ ಸುತ್ತು: ಕೊಲಂಬಿಯಾದ ಡ್ಯಾನಿಯಲ್ ಎಲಾಹಿ ವಿರುದ್ಧ 6-0, 6-3, 6-2ರಲ್ಲಿ ಜಯ

ನಾಲ್ಕನೇ ಸುತ್ತು: ರಷ್ಯಾದ ಕರೇನ್ ಖಚನೊವ್ ಎದುರು 6-4, 6-3, 6-3ರಲ್ಲಿ ಜಯ

ಕ್ವಾರ್ಟರ್ ಫೈನಲ್: ಸ್ಪೇನ್‌ನ ಕರೆನೊ ಬೂಸ್ಟಾ ವಿರುದ್ಧ 4-6, 6-2, 6-3, 6-4ರಲ್ಲಿ ಜಯ

ಸೆಮಿಫೈನಲ್: ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್ ಎದುರು 6-3, 6-2, 5-7, 4-6, 6-1ರಲ್ಲಿ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.