ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಟೋಕಿಯೊ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಆಡಲಿರುವ ನಗಾಲ್‌

Last Updated 16 ಜುಲೈ 2021, 12:13 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ಸಿಂಗಲ್ಸ್ ವಿಭಾಗದಲ್ಲಿ ಆಡಲು ಭಾರತದ ಟೆನಿಸ್ ಆಟಗಾರ ಸುಮಿತ್ ನಗಾಲ್ ಅರ್ಹತೆ ಗಳಿಸಿದ್ದಾರೆ. ಈ ಕುರಿತು ಅಖಿಲ ಭಾರತ ಟೆನಿಸ್ ಸಂಸ್ಥೆಗೆ (ಎಐಟಿಎ) ಶುಕ್ರವಾರ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ (ಐಟಿಎಫ್) ಮಾಹಿತಿ ನೀಡಿದೆ.

ಕ್ರೀಡಾಕೂಟಕ್ಕೆ ನೇರ ಪ್ರವೇಶಕ್ಕಾಗಿ ಪರಿಗಣಿಸಲು ಕೊನೆಯ ದಿನವಾದ ಜೂನ್ 14ರಂದು ನಗಾಲ್ 144ನೇ ರ‍್ಯಾಂಕಿಂಗ್‌ನಲ್ಲಿದ್ದರು. ಹೀಗಾಗಿ ಅವರಿಗೆ ಟೋಕಿಯೊಗೆ ತೆರಳಲು ಅನುಮೋದನೆ ದೊರೆತಿದೆ.

ಭಾರತದ ಪ್ರಜ್ಞೇಶ್ ಗುಣೇಶ್ವರನ್ 148ನೇ ಸ್ಥಾನದಲ್ಲಿದ್ದರು. ಹೀಗಾಗಿ ಅವರೂ ಪ್ರವೇಶ ಗಿಟ್ಟಿಸುವರೇ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ. ಕೋವಿಡ್‌ ತಡೆಗಾಗಿ ಜಾರಿಗೊಳಿಸುತ್ತಿರುವ ಕಠಿಣ ನಿಯಮಗಳ ಹಿನ್ನೆಲೆಯಲ್ಲಿ ಅನೇಕರು ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಕಾರಣ ಅರ್ಹತಾ ರ‍್ಯಾಂಕಿಂಗ್ ಮಾನದಂಡ ಕಡಿಮೆಯಾಗುತ್ತ ಬರುತ್ತಿದೆ.

‘ಸಿಂಗಲ್ಸ್ ಆಡಲು ಸುಮಿತ್ ಅರ್ಹತೆ ಪಡೆದಿದ್ದಾರೆಂದು ನಮಗೆ ಐಟಿಎಫ್‌ನಿಂದ ಸಂದೇಶ ಬಂದಿದೆ. ಆಟಗಾರನ ವಿವರಗಳನ್ನು ಒದಗಿಸಲು ಕೇಳಿದ್ದಾರೆ. ಆ ಪ್ರಕ್ರಿಯೆ ಜಾರಿಯಲ್ಲಿದೆ‘ ಎಂದು ಎಐಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗಾಲ್‌ಗೆ ಪ್ರವೇಶ ದೊರೆತಿರುವುದರಿಂದ ಭಾರತಕ್ಕೆ ಈಗ ಮಿಶ್ರ ಡಬಲ್ಸ್‌ನಲ್ಲೂ ಆಡುವ ಅವಕಾಶ ಇದೆ.

ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಕಣಕ್ಕಿಳಿಯುತ್ತಿದ್ದಾರೆ.

ಯೂಕಿ ಅಲಭ್ಯ: 127 ರ‍್ಯಾಂಕ್‌ನಲ್ಲಿರುವ ಯೂಕಿ ಭಾಂಬ್ರಿ ಕೂಡ ಟೋಕಿಯೊ ಟಿಕೆಟ್ ಗಿಟ್ಟಿಸಿದ್ದರು. ಆದರೆ ಮೊಣಕಾಲು ಗಾಯಕ್ಕೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಕೂಟದಲ್ಲಿ ಆಡುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT