ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌: ನೊವಾಕ್‌ ಜೊಕೊವಿಚ್‌ ಮುನ್ನಡೆ

ಪವ್ಲಿಚೆಂಕೋವಾ ಶುಭಾರಂಭ
Published 29 ಮೇ 2023, 21:34 IST
Last Updated 29 ಮೇ 2023, 21:34 IST
ಅಕ್ಷರ ಗಾತ್ರ

ಪ್ಯಾರಿಸ್‌: ಸೊಗಸಾದ ಆಟವಾಡಿದ ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು.

ರೋಲಂಡ್‌ ಗ್ಯಾರೋಸ್‌ನ ಫಿಲಿ‍ಪ್‌ ಚಾಟ್ರಿಯರ್‌ ಕೋರ್ಟ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6–3, 6–2, 7–6 ರಲ್ಲಿ ಅಮೆರಿಕದ ಅಲೆಕ್ಸಾಂಡರ್‌ ಕೊವಸೆವಿಚ್‌ ವಿರುದ್ಧ ಗೆದ್ದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಜೊಕೊವಿಚ್‌, ಶಿಸ್ತಿನ ಆಟವಾಡಿ 2 ಗಂಟೆ 26 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಮೊದಲ ಎರಡು ಸೆಟ್‌ಗಳನ್ನು ಸುಲಭವಾಗಿ ಜಯಿಸಿದ ಅವರಿಗೆ ಮೂರನೇ ಸೆಟ್‌ನಲ್ಲಿ ಕೊವಸೆವಿಚ್‌ ಅಲ್ಪ ಪೈಪೋಟಿ ಒಡ್ಡಿದರು.

ಎರಡು ಬಾರಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಅಮೆರಿಕದ ಆಟಗಾರ ಮೂರನೇ ಸೆಟ್‌ಅನ್ನು ಟೈಬ್ರೇಕರ್‌ಗೆ ಕೊಂಡೊಯ್ದರು. ಟೈಬ್ರೇಕರ್‌ನಲ್ಲಿ ಲಯ ಕಂಡುಕೊಂಡ ಜೊಕೊವಿಚ್‌ 7–1 ರಲ್ಲಿ ಜಯಿಸಿ ಪಂದ್ಯ ತಮ್ಮದಾಗಿಸಿಕೊಂಡರು.

ನೋರಿಗೆ ಜಯ: ಐದು ಸೆಟ್‌ಗಳ ಹಣಾಹಣಿ ನಡೆದ ಪಂದ್ಯದಲ್ಲಿ ಬ್ರಿಟನ್‌ನ ಕ್ಯಾಮರಾನ್‌ ನೋರಿ 7-5, 4-6, 3-6, 6-1, 6-4 ರಲ್ಲಿ ಫ್ರಾನ್ಸ್‌ನ ಬೆನೊಯ್ಟ್‌ ಪೇರ್‌ ಅವರನ್ನು ಮಣಿಸಿದರೆ, ಕೆನಡಾದ ಡೆನಿಸ್‌ ಶಪೊವಲೊವ್‌ 6-4, 7-5, 4-6, 3-6, 6-3 ರಲ್ಲಿ ಅಮೆರಿಕದ ಬ್ರೆಂಡನ್‌ ನಕಶಿಮ ಎದುರು ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಸ್ಪೇನ್‌ನ ರಾಬರ್ಟೊ ಬಾಟಿಸ್ಟಾ ಆಗಟ್ 7–6, 6–1, 6–1 ರಿಂದ ಚೀನಾದ ವು ಯುಬಿಂಗ್‌ ವಿರುದ್ಧ; ಅರ್ಜೆಂಟೀನಾದ ಡಿಯಾಗೊ ಶ್ವಾರ್ಟ್ಸ್‌ಮನ್‌ 1-6, 6-7, 6-2, 6-0, 6-4 ರಿಂದ ಸ್ಪೇನ್‌ನ ಬೆರ್ನೇಬ್‌ ಮಿರಾಲೆಸ್‌ ವಿರುದ್ದ; ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್‌ 6-1, 5-7, 6-1, 6-3 ರಲ್ಲಿ ಇಲ್ಯಾ ಇವಾಶ್ಕ ವಿರುದ್ಧ ಗೆಲುವು ಸಾಧಿಸಿದರು.

ಪವ್ಲಿಚೆಂಕೋವಾ ಶುಭಾರಂಭ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅನಸ್ತೇಸಿಯಾ ಪವ್ಲಿಚೆಂಕೋವಾ ಅವರು ಶುಭಾರಂಭ ಮಾಡಿದರು. ಸೋಮವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು 6–2, 6–2 ರಲ್ಲಿ ಜೆಕ್‌ ರಿಪಬ್ಲಿಕ್‌ನ ಲಿಂಡಾ ಫ್ರುವಿರ್ತೋವಾ ಅವರನ್ನು ಮಣಿಸಿದರು.

2021 ರಲ್ಲಿ ಇಲ್ಲಿ ರನ್ನರ್‌ ಅಪ್ ಆಗಿದ್ದ 31 ವರ್ಷದ ಪವ್ಲಿಚೆಂಕೋವಾ ಅವರು 18 ವರ್ಷದ ಆಟಗಾರ್ತಿಯ ವಿರುದ್ಧ ಎರಡೂ ಸೆಟ್‌ಗಳಲ್ಲಿ ಸೊಗಸಾದ ಪ್ರದರ್ಶನ ನೀಡಿದರು.

ಅಮೆರಿಕದ ಸ್ಲೊವಾನೆ ಸ್ಟೀಫನ್ಸ್‌ 6–0, 6–4 ರಲ್ಲಿ ಜೆಕ್‌ ರಿಪಬ್ಲಿಕ್‌ನ ಕರೋಲಿನಾ ಪಿಸ್ಕೊವಾ ವಿರುದ್ಧ ಗೆದ್ದರೆ, ಅಮೆರಿಕದ ಬರ್ನಾರ್ಡಾ ಪೆರಾ 7–6, 6–2 ರಲ್ಲಿ ಅನೆಟ್ ಕೊಂಟಾವೆಟ್‌ ಅವರನ್ನು ಸೋಲಿಸಿದರು.

ಅಮೆರಿಕದ ಕೈಲಾ ಡೇ ಮತ್ತು ಮ್ಯಾಡಿಸನ್‌ ಕೀಸ್‌ ಅವರೂ ಎರಡನೇ ಸುತ್ತಿಗೆ ಮುನ್ನಡೆದರು. ಕೈಲಾ 7–5, 6–1 ರಲ್ಲಿ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಚ್‌ ವಿರುದ್ಧವೂ, ಕೀಸ್‌ 6–1, 3–6, 6–1 ರಲ್ಲಿ ಎಸ್ಟೋನಿಯದ ಕಾಯಾ ಕನೆಪಿ  ಎದುರೂ ಜಯಿಸಿದರು.

ಗೆಲುವಿನ ಸಂಭ್ರಮದಲ್ಲಿ ಜೊಕೊವಿಚ್ –ಎಎಫ್‌ಪಿ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಜೊಕೊವಿಚ್ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT