ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಟೆನಿಸ್: ಮೊದಲ ಪ್ರಮುಖ ಪ್ರಶಸ್ತಿಗೆ ಝೆಂಗ್‌–ಡೋನಾ ಸ್ಪರ್ಧೆ

Published : 3 ಆಗಸ್ಟ್ 2024, 0:23 IST
Last Updated : 3 ಆಗಸ್ಟ್ 2024, 0:23 IST
ಫಾಲೋ ಮಾಡಿ
Comments

ಪ್ಯಾರಿಸ್‌: ಚೀನಾದ ಝೆಂಗ್‌ ಕ್ವಿನ್‌ವೆನ್‌ ಮತ್ತು ಕ್ರೊವೇಷ್ಯಾದ ಡೋನಾ ವೆಕಿಚ್‌ ಅವರು ಒಲಿಂಪಿಕ್ಸ್‌ ಟೆನಿಸ್‌ ಮಹಿಳಾ ಸಿಂಗಲ್ಸ್‌ ಫೈನಲ್ ತಲುಪಿದ್ದಾರೆ. ಶನಿವಾರ ನಡೆಯುವ ಫೈನಲ್‌ನಲ್ಲಿ ಯಾರು ಗೆದ್ದರೂ ಅದು ಆ ದೇಶಕ್ಕೆ ಮೊದಲ ಟೆನಿಸ್‌ ಸಿಂಗಲ್ಸ್‌ ಸ್ವರ್ಣವಾಗಲಿದೆ.

ಫೈನಲ್ ಹಣಾಹಣಿ ಇಬ್ಬರಿಗೂ ಅತಿ ಮಹತ್ವದ್ದು. ಏಕೆಂದರೆ ಈ ಇಬ್ಬರೂ ಯಾವುದೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿ ಗೆದ್ದಿಲ್ಲ.

‘ನನ್ನ ದೇಶ ಚೀನಾಕ್ಕೆ ಪದಕ ಗೆಲ್ಲಿಸಿಕೊಡುವ ಅಥ್ಲೀಟುಗಳಲ್ಲಿ ಒಬ್ಬಳಾಗಬೇಕೆಂಬುದು ನನ್ನ ಆಸೆಯಾಗಿತ್ತು. ಈಗ ನಾನೂ ಒಬ್ಬಳಾಗಿದ್ದೇನೆ’ ಎಂದು ಝೆಂಗ್ ಹೇಳಿದರು. ಅವರು ಸೆಮಿಫೈನಲ್‌ನಲ್ಲಿ 6–2, 7–5 ರಿಂದ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್ ಅವರನ್ನು ಹೊರದೂಡಿದ್ದರು. ಆ ಸೋಲಿನೊಡನೆ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಪೋಲೆಂಡ್‌ ಆಟಗಾರ್ತಿಯ ಸತತ 25 ಪಂದ್ಯಗಳ ಗೆಲುವಿನ ಸರಪಳಿ ತುಂಡಾಗಿತ್ತು.

ವೆಕಿಚ್‌ ಫೈನಲ್ ತಲುಪುವ ಹಾದಿಯಲ್ಲಿ ಇಬ್ಬರು ಗ್ರ್ಯಾನ್‌ಸ್ಲಾಮ್‌ ವಿಜೇತರನ್ನು ಮಣಿಸಿದ್ದಾರೆ. 2019ರ ಅಮೆರಿಕ ಓಪನ್ ವಿಜೇತೆ ಬಿಯಾಂಕ ಆಂಡ್ರೆಸ್ಯ್ಕಯ (ಕೆನಡಾ), ಮೂರನೇ ಸುತ್ತಿನಲ್ಲಿ ಅಮೆರಿಕ ಓಪನ್ ಹಾಲಿ ಚಾಂಪಿಯನ್ ಕೊಕೊ ಗಾಫ್‌ ಅವರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ ಅವರು ಅನ್ನಾ ಕರೋಲಿನಾ ಸ್ಮಿಡ್ಲೊವಾ ಅವರನ್ನು 6–4, 6–0 ಯಿಂದ ಮಣಿಸಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಕಾರ್ಲೋಸ್‌ ಅರ್ಲರಾಜ್‌, ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್ ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT