ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌: ಅರ್ಹತಾ ಸುತ್ತಿನಲ್ಲಿ ಸೋತ ರಾಮನಾಥನ್‌

Last Updated 22 ಸೆಪ್ಟೆಂಬರ್ 2020, 11:54 IST
ಅಕ್ಷರ ಗಾತ್ರ

ಪ್ಯಾರಿಸ್‌: ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಸಿಂಗಲ್ಸ್ ವಿಭಾಗದಮುಖ್ಯ ಸುತ್ತಿಗೆ ಪ್ರವೇಶಿಸುವ ರಾಮಕುಮಾರ್‌ ರಾಮನಾಥನ್‌ ಅವರ ಕನಸು ನನಸಾಗಲಿಲ್ಲ. ಫ್ರೆಂಚ್‌ ಓಪನ್‌ ಅರ್ಹತಾ ಟೂರ್ನಿಯಲ್ಲಿ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರ 5–7, 2–6ರಿಂದ ತ್ರಿಸ್ಟಾನ್‌ ಫ್ರಾನ್ಸ್‌ನ ಲ್ಯಾನಸೈನ್‌ ಎದುರು ಸೋತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 198ನೇ ಸ್ಥಾನದಲ್ಲಿರುವ ರಾಮಕುಮಾರ್‌ ಅವರಿಗೆ ತನಗಿಂತ ಕೆಳ ಕ್ರಮಾಂಕದ (268) ಆಟಗಾರ ತ್ರಿಸ್ಟಾನ್‌ ಸವಾಲು ಮೀರಲಾಗಲಿಲ್ಲ.

25 ವರ್ಷದ ರಾಮಕುಮಾರ್ ಅವರು ತಾವು ಗಳಿಸಿದ ಎಂಟು ಬ್ರೇಕ್‌ಪಾಯಿಂಟ್‌ಗಳಲ್ಲಿ ಏಳು ಪಾಯಿಂಟ್ಸ್‌ ಕೈಚೆಲ್ಲಿದರು. ನಾಲ್ಕು ಬಾರಿ ಸರ್ವ್‌ ಕಳೆದುಕೊಂಡರು.

ಭಾರತದ ಅಗ್ರ ಕ್ರಮಾಂಕದ ಆಟಗಾರ ಸುಮಿತ್ ನಗಾಲ್‌ ಅವರು ಟೂರ್ನಿಯಿಂದ ಈಗಾಗಲೇ ನಿರ್ಗಮಿಸಿದ್ದು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಜ್ಞೇಶ್‌ ಗುಣೇಶ್ವರನ್‌ ಮಾತ್ರ ಉಳಿದುಕೊಂಡಿದ್ದಾರೆ.

ರಾಮಕುಮಾರ್‌ ಅವರು 2015ರಿಂದ ಗ್ರ್ಯಾನ್‌ಸ್ಲಾಮ್‌ ಮುಖ್ಯ ಸುತ್ತಿನ ಟಿಕೆಟ್‌ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಶಸ್ಸು ಸಿಕ್ಕಿಲ್ಲ. 2018ರ ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದೇ ಅವರ ಇದುವರೆಗಿನ ಶ್ರೇಷ್ಠ ಸಾಧನೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಂಕಿತಾ ರೈನಾ ಅವರು ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸರ್ಬಿಯಾದ ಜೋವಾನಾ ಜೊವಿಕ್‌ ಅವರ ವಿರುದ್ಧ ಸೆಣಸಲಿದ್ದಾರೆ. ಅಂಕಿತಾ ಅವರು ವಿಶ್ವಕ್ರಮಾಂಕದಲ್ಲಿ 176ನೇ ಸ್ಥಾನದಲ್ಲಿದ್ದರೆ, ಜೊವಾನಾ ಅವರ ಕ್ರಮಾಂಕ 234.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT