ಗುರುವಾರ , ಜುಲೈ 7, 2022
23 °C

ಟೆನಿಸ್‌: ರಿತೀಶ್, ಆದ್ಯಗೆ ಪ್ರಶಸ್ತಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಮಿಳುನಾಡಿನ ಎ.ಎಸ್‌.ರಿತೀಶ್‌ ಅಭನವ್ ಮತ್ತು ಆತಿಥೇಯ ಕರ್ನಾಟಕದ ಆದ್ಯ ಚೌರಾಸಿಯಾ ಅವರು ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆ ಆಯೋಜಿಸಿರುವ ಎಂಎಟಿ–ಎಐಟಿಎ ಟಿಎಸ್‌–7 ಸರಣಿಯ 12 ವರ್ಷದೊಳಗಿನವರ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿ ಗೆದ್ದುಕೊಂಡರು. 

ಮುರುಗನ್ ಅಕಾಡೆಮಿ ಆಫ್‌ ಟೆನಿಸ್‌ ಆವರಣದಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ರಿತೀಶ್‌ 6–3, 6–0 ಅಂತರದಲ್ಲಿ ಕರ್ನಾಟಕದ ಆರುಷ್ ಗುರುರಾಜ್ ವಿರುದ್ಧ ಜಯ ಗಳಿಸಿದರು. 

ಬಾಲಕಿಯರ ವಿಭಾಗದಲ್ಲಿ ಆದ್ಯ 6–3, 1–6, 6–4ರಲ್ಲಿ ಕರ್ನಾಟಕದವರೇ ಆದ ಪೂಜಾ ನಾಗರಾಜ್ ವಿರುದ್ಧ ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಆದ್ಯ 3–1ರ ಮುನ್ನಡೆಯಲ್ಲಿದ್ದಾಗ ಪೂಜಾ ತಿರುಗೇಟು ನೀಡಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಆದ್ಯ ಮತ್ತೆ ನೈಜ ಸಾಮರ್ಥ್ಯ ತೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು