ಬೆಂಗಳೂರು: ಜಿದ್ದಾಜಿದ್ದಿ ಪೈಪೋಟಿಯಲ್ಲಿ ರಿತಿಕಾ ರವಿ ಅವರು ನಾಲ್ಕನೇ ಶ್ರೇಯಾಂಕದ ತನು ವಿಶ್ವಾಸ್ ಅವರಿಗೆ ಸೋಲುಣಿಸಿ ಎಐಟಿಎ ಸಿಎಸ್7 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.

ಶ್ರೀನಾಥ್ ಅಕಾಡೆಮಿ ಟೆನಿಸ್ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ಪ್ರೀಕ್ವಾರ್ಟರ್ಫೈನಲ್ನಲ್ಲಿ ಮಂಗಳವಾರ ರಿತಿಕಾ ಅವರಿಗೆ7-5, 4-6, 6-2ರಿಂದ ಗೆಲುವು ಒಲಿಯಿತು.

ಬಾಲಕಿಯರ ವಿಭಾಗದ ಇನ್ನುಳಿದ ಪ್ರೀಕ್ವಾರ್ಟರ್ಫೈನಲ್ ಹಣಾಹಣಿಗಳಲ್ಲಿ ಸಾನ್ವಿ ಮಿಶ್ರಾ6-1, 6-2ರಿಂದ ಬಿ.ತೇಜಸ್ವಿ ವಿರುದ್ಧ, ಇಶಾ ಮೋಹಿತೆ6-4, 6-3ರಿಂದ ಶ್ರಾವ್ಯಾ ನಂಬೂರಿ ಎದುರು, ಆದ್ಯಾ ಚೌರಾಸಿಯಾ7-6 (4), 6-1ರಿಂದ ಎಲಿನ್ ಹರ್ಷಿಣಿ ಎದುರು, ದಿಶಾ ಕುಮಾರ್5-7, 7-6 (5), 6-2ರಿಂದ ಅಕ್ಷರಾ ಸೆಂಥಿಲ್ ವಿರುದ್ಧ ಗೆಲುವು ಸಾಧಿಸಿದರು.

ಹೇಮಜಾ ರೆಡ್ಡಿ6-0, 7-5ರಿಂದ ಪಿ. ಪ್ರಿಯಾ ವಿರುದ್ಧ, ಅರ್ಜಾನ್ ಕೊರಾಕಿವಾಲಾ6-1, 6-0ರಿಂದ ಎಶಿತಾ ಶ್ರೀಯಾಲ ವಿರುದ್ಧ ಗೆದ್ದರು. ಜಿಯಾ ಸಿಂಗ್ ಅವರಿಗೆ ವಾಕ್ಓವರ್ ಲಭಿಸಿತು.

ಬಾಲಕರ ವಿಭಾಗದ ಪ್ರೀಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಮೀರ್ ಫಜಲ್ ಅಲಿ6-0, 6-1ರಿಂದ ಆರುಷ್ ಮಲ್ಲಣ್ಣವರ್ ಎದುರು, ಅಹಿಲ್ ಅಯಾಜ್6-2, 6-3ರಿಂದ ಅನಿರುದ್ಧ ಪಳನಿಸ್ವಾಮಿ ವಿರುದ್ಧ, ಎಂ. ದಿಗಂತ್6-0, 6-1ರಿಂದ ಶ್ರೀರಾಮ್ ಕಿಶೋರ್ ವಿರುದ್ಧ, ವಿ.ಎಸ್. ರಘು6-4, 6-3ರಿಂದ ಹೃದಯ್ ವಿವೇಕಾನಂದನ್ ಎದುರು ಗೆದ್ದರು.

ಅನಂತಕೃಷ್ಣನ್6-0, 6-2ರಿಂದ ಗಿರೀಶ್ ನಾರಾಯಣ್ ಎದುರು, ರಿತಿಕ್ ಜಯಂತ್6-2, 6-1ರಿಂದ ಪ್ರಣವ್ ರಾಜೇಶ್ ವಿರುದ್ಧ, ವಿಷ್ಣು ಮೋಹನ್7-6 (3), 7-6 (4)ರಿಂದ ಆರ್. ತೇಜಸ್ ವಿರುದ್ಧ, ಚೆನ್ನಮಲ್ಲಿಕಾರ್ಜುನ6-3, 6-4ರಿಂದ ಸಕ್ಷಮ್ ಭನ್ಸಾಲಿ ವಿರುದ್ಧ ಜಯಿಸಿ ಎಂಟರಘಟ್ಟ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.