ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದಲ್ಲಿ ಸಾನಿಯಾ, ಅಂಕಿತಾ, ಕರ್ಮನ್‌ ಕೌರ್‌

ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್ ಏಷ್ಯಾ ಒಷಾನಿಯಾ ಗುಂಪು 1ರ ಸ್ಪರ್ಧೆ
Last Updated 8 ಮಾರ್ಚ್ 2022, 11:52 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಸಾನಿಯಾ ಮಿರ್ಜಾ, ಸಿಂಗಲ್ಸ್ ಆಟಗಾರ್ತಿಯರಾದ ಅಂಕಿತಾ ರೈನಾ ಮತ್ತು ಕರ್ಮನ್ ಕೌರ್ ಥಂಡಿ ಅವರು ಬಿಲ್ಲಿ ಜೀನ್ ಕಿಂಗ್‌ ಕಪ್ ಟೆನಿಸ್ ಟೂರ್ನಿಯ ಏಷ್ಯಾ ಒಷಾನಿಯಾ ಗುಂಪು 1ರ ಸ್ಪರ್ಧೆಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಏಪ್ರಿಲ್ 12ರಿಂದ ಟರ್ಕಿಯ ಅಂಟಲ್ಯಾದಲ್ಲಿ ಈ ಪಂದ್ಯಗಳು ನಡೆಯಲಿವೆ. ಋತುಜಾ ಭೋಸ್ಲೆ ಸ್ಥಾನ ಉಳಿಸಿಕೊಂಡಿದ್ದು, ರಿಯಾ ಭಾಟಿಯಾ ಅವರು ಜೀಲ್ ದೇಸಾಯಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಶಾಲಿನಿ ಠಾಕೂರ್ ಅವರು ತಂಡದ ಕೋಚ್ ಆಗಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಲಾಟ್ವಿಯಾ ಎದುರು ನಡೆದ ಪ್ಲೇ ಆಫ್‌ನಲ್ಲಿ ಭಾರತ ತಂಡದ ಆಟಗಾರ್ತಿಯರು 1–3ರಿಂದ ಸೋಲುವ ಮೂಲಕ ವಲಯ ಸ್ಪರ್ಧೆಗೆ ಮರಳಿದ್ದರು.

ಭಾರತವು ಚೀನಾ, ಇಂಡೊನೇಷ್ಯಾ, ಜಪಾನ್, ಕೊರಿಯಾ ರಿಪಬ್ಲಿಕ್ ಮತ್ತು ನ್ಯೂಜಿಲೆಂಡ್‌ ಎದುರು ರೌಂಡ್-ರಾಬಿನ್ ಮಾದರಿಯಲ್ಲಿ ಸ್ಪರ್ಧಿಸಲಿದ್ದು, ಅಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತವೆ.

ಮುಂದಿನ ಹಂತಕ್ಕೆ ಮುನ್ನಡೆಯಲು ಭಾರತದ ಆಟಗಾರ್ತಿಯರು ಭಾರಿ ಬೆವರು ಹರಿಸಬೇಕು ಎಂದು ನಾಯಕ ವಿಶಾಲ್ ಉಪ್ಪಳ್ ಹೇಳಿದ್ದಾರೆ.

‘ಉತ್ತಮ ಶ್ರೇಯಾಂಕ ಹೊಂದಿರುವರಿಯಾ ಅವರಿಗೆ ಅವಕಾಶ ನೀಡಿರುವುದು ಅರ್ಹವಾಗಿದೆ ಎಂದುಆಯ್ಕೆ ಸಮಿತಿಯು ಭಾವಿಸಿದೆ. ಕೊರೊನಾ ಸೋಂಕಿನ ಕಾರಣ ಅವರು ಕಳೆದ ಬಾರಿ ಆಡಿರಲಿಲ್ಲ. ಇದು ತೀವ್ರ ಪೈಪೋಟಿಯಿಂದ ಕೂಡಿರುವ ವಲಯವಾಗಿದೆ. ಚೀನಾ ಮತ್ತು ಜಪಾನ್ ನಮಗೆ ಭಾರಿ ಸವಾಲಾಗಬಹುದು‘ ಎಂದು ಉಪ್ಪಳ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT