ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಟಾಪ್ ಯೋಜನೆಯಲ್ಲಿ ಸಾನಿಯಾ ಮಿರ್ಜಾ

Last Updated 7 ಏಪ್ರಿಲ್ 2021, 23:27 IST
ಅಕ್ಷರ ಗಾತ್ರ

ನವದೆಹಲಿ: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ನಾಲ್ಕು ವರ್ಷಗಳ ನಂತರ ಟಾಪ್ಸ್‌ನಲ್ಲಿ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್‌) ಸ್ಥಾನ ಗಳಿಸಿದ್ದಾರೆ. ಬುಧವಾರ ನಡೆದ ಮಿಷನ್ ಒಲಿಂಪಿಕ್ ಘಟಕದ ಸಭೆಯಲ್ಲಿ ಸಾನಿಯಾ ಅವರನ್ನು ಯೋಜನೆಯಲ್ಲಿ ಸೇರಿಸಲು ನಿರ್ಧರಿಸಲಾಯಿತು ಎಂದು ಭಾರತ ಕ್ರೀಡಾ ಪ್ರಾಧಿಕಾರ ತಿಳಿಸಿದೆ.

ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ, 34 ವರ್ಷದ ಸಾನಿಯಾ 2017ರಲ್ಲಿ ಟಾಪ್ಸ್‌ಗೆ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ಯೋಜನೆಯಿಂದ ದೂರ ಉಳಿಯಲು ನಿರ್ಧರಿಸಿದ್ದರು.

ಮಗುವಿನ ತಾಯಿಯಾಗಿರುವ ಸಾನಿಯಾ ಗರ್ಭಿಣಿಯಾಗಿದ್ದಾಗ ಟೆನಿಸ್ ಅಂಗಣದಿಂದ ದೂರ ಉಳಿದಿದ್ದರು. ಆದರೆ ಡಬ್ಲ್ಯುಟಿಎಯ ವಿಶೇಷ ರ‍್ಯಾಂಕಿಂಗ್‌ ಮಾನದಂಡದಡಿ ರ‍್ಯಾಂಕಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT