ಸೋಮವಾರ, ಮಾರ್ಚ್ 27, 2023
31 °C

Australian Open 2023| ಸಾನಿಯಾ ಜೋಡಿ, ಜೀವನ್–ಬಾಲಾಜಿ ಪರಾಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಭಾರತದ ಸಾನಿಯಾ ಮಿರ್ಜಾ ಅವರ ಕೊನೆಯ ಗ್ರ್ಯಾನ್‌ಸ್ಲಾಮ್‌ ಡಬಲ್ಸ್ ಪಂದ್ಯ ಸೋಲಿನೊಂದಿಗೆ ಅಂತ್ಯವಾಯಿತು. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಸಾನಿಯಾ ಅವರ ಕಜಕಸ್ತಾನದ ಜೊತೆಗಾರ್ತಿ ಅನ್ನಾ ಡ್ಯಾನಿಲಿನಾ 4-6, 6-4, 2-6ರಿಂದ ಬೆಲ್ಜಿಯಂನ ಅಲಿಸನ್‌ ವ್ಯಾನ್‌ ಯುತ್ವಂಕ್‌ ಮತ್ತು ಉಕ್ರೇನ್‌ನ ಅನ್ಹೆಲಿನಾ ಕಲಿನಿನಾ ಎದುರು ಸೋತರು.

ಸಾನಿಯಾ ಅವರು ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆಯಾಗಿ ಆಡಲಿದ್ದಾರೆ. ಪುರುಷರ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ಎನ್‌. ಶ್ರೀರಾಮ್ ಬಾಲಾಜಿ– ಜೀವನ್ ನೆಡುಂಚೇಳಿಯನ್‌ 4-6 4-6ರಿಂದ ಫ್ರಾನ್ಸ್‌ನ ಜೆರೆಮಿ ಚಾರ್ಡಿ– ಫ್ಯಾಬ್ರಿಕ್ ಮಾರ್ಟಿನ್ ವಿರುದ್ಧ ಸೋತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು