ಅಡಿಲೇಡ್: ಭಾರತದ ಸಾನಿಯಾ ಮಿರ್ಜಾ ಮತ್ತು ಉಕ್ರೇನನ್ ನಾದಿಯಾ ಕಿಎನಾಕ್ ಜೋಡಿಯು ಡಬ್ಲ್ಯುಟಿಎ ಅಡಿಲೇಡ್ ಇಂಟರ್ನ್ಯಾಷನಲ್ 1 ಟೂರ್ನಿಯಲ್ಲಿ ಡಬಲ್ಸ್ ಸೆಮಿಫೈನಲ್ ಪ್ರವೇಶಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿಯು 6-0, 1-6, 10-5ರಿಂದ ಅಮೆರಿಕದ ಶೆಲ್ಬಿ ರೋಜರ್ಸ್ ಮತ್ತು ಬ್ರಿಟನ್ನ ಹೀಥರ್ ವಾಟ್ಸನ್ ಜೋಡಿಯ ವಿರುದ್ಧ ಪ್ರಯಾಸದ ಜಯ ದಾಖಲಿಸಿತು. 55 ನಿಮಿಷಗಳ ಹೋರಾಟದಲ್ಲಿ ಸಾನಿಯಾ ಜೋಡಿಯು ಮೇಲುಗೈ ಸಾಧಿಸಿತು.

ನಾಲ್ಕರ ಘಟ್ಟದಲ್ಲಿ ಸಾನಿಯಾ–ನಾದಿಯಾ ಜೋಡಿಯು ಆಸ್ಟ್ರೇಲಿಯಾದ ಆಷ್ಲೆ ಬಾರ್ಟಿ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ ಜೋಡಿಯನ್ನು ಎದುರಿಸಲಿದೆ.

ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಸಾನಿಯಾ ಜೋಡಿಯು 1–6, 6–3, 10–8ರಿಂದ ಗ್ಯಾಬ್ರಿಯ್ ದಬ್ರೊವಸ್ಕಿ ಮತ್ತು ಗಿಲಿಯಾನಾ ಒಲ್ಮ್ಸ್ ಅವರನ್ನು ಮಣಿಸಿತ್ತು.

ಇದೇ 17ರಿಂದ ಮೆಲ್ಬರ್ನ್ನಲ್ಲಿಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಪೂರ್ವಭಾವಿಯಾಗಿ ಡಬ್ಲ್ಯುಟಿಎ ಟೂರ್ನಿಯು ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.