ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಒಡತಿ ಈ ಮೂಗುತಿ ಸುಂದರಿ

Last Updated 19 ಜನವರಿ 2022, 15:29 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಭಾರತದ ಟೆನಿಸ್ ಕ್ಷೇತ್ರದದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮತ್ತು ಮಹಿಳಾ ಟೆನಿಸ್‌ನ ಪ್ರೇರಣಾ ಶಕ್ತಿಯಾಗಿರುವ ಹೈದರಾಬಾದ್‌ನ ಮೂಗುತಿ ಸುಂದರಿ ಸಾನಿಯಾ ಆರು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಒಡತಿ. ಸಿಂಗಲ್ಸ್‌ನಲ್ಲಿ ನಾಲ್ಕು ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲೂ ಆಡಿ ಗರಿಷ್ಠ ನಾಲ್ಕನೇ ಸುತ್ತು ಪ್ರವೇಶಿಸಿರುವ ಅವರು ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ವಿಂಬಲ್ಡನ್ ಸೇರಿದಂತೆ ನಾಲ್ಕು ಸ್ಲಾಂಗಳಲ್ಲೂ ಪ್ರಶಸ್ತಿ ಗೆದ್ದಿದ್ದಾರೆ.

ಸ್ವಿಜರ್ಲೆಂಡ್‌ನ ಖ್ಯಾತಿ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜೊತೆ ಅತ್ಯಂತ ಯಶಸ್ವಿಯಾಗಿ ಡಬಲ್ಸ್ ಪಂದ್ಯಗಳನ್ನು ಆಡಿರುವ ಅವರು ಭಾರತದ ಮಹೇಶ್ ಭೂಪತಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲೂ ಮಿಂಚಿದ್ದಾರೆ. ಡಬಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನಕ್ಕೇರಿದ ಶ್ರೇಯಸ್ಸು ಕೂಡ ಅವರದಾಗಿದೆ.

‘ಆಟವನ್ನು ಆಸ್ವಾದಿಸಲು ಆಗುವ ವರೆಗೂ ಕಣದಲ್ಲಿರುವೆ ಎಂದು ಹೇಳುತ್ತಾ ಬಂದಿದ್ದೇನೆ. ಆಡಲು ಇಳಿಯುವಾಗ ಗೆಲ್ಲುವುದೊಂದೇ ನನ್ನ ಉದ್ದೇಶ ಆಗಿರುವುದಿಲ್ಲ. ಆಟದ ರಸವನ್ನು ಸವಿಯುತ್ತ ಅಡಿದ್ದೇನೆ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ ಎಂಬುದು ಈಗ ಅರಿವಾಗಿದೆ. ಆದ್ದರಿಂದ ನಿವೃತ್ತಿಗೆ ಇದು ಸೂಕ್ತ ಕಾಲ ಎಂದೆನಿಸುತ್ತದೆ’ ಎಂದು ಸಾನಿಯಾ ಹೇಳಿದ್ದಾರೆ.

‘ಈಗಲೂ ಚೆನ್ನಾಗಿ ಆಡುತ್ತಿದ್ದೇನೆ. ಅಡಿಲೇಡ್‌ ಓಪನ್‌ನಲ್ಲಿ ಮೊದಲ ವಾರ ಅಗ್ರ 10ರೊಳಗಿರುವವರನ್ನು ಕಿಚೆನಾಕ್ ಜೊತೆಗೂಡಿ ಮಣಿಸಿದ್ದೇನೆ. ಆದರೆ ಇದು ನನ್ನ ಕೊನೆಯ ಋತುವಾಗಲಿದೆ. ಮುಂದಿನ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ’ ಎಂದು ಭಾವುಕರಾದರು.

‘ಮೆಲ್ಬರ್ನ್ ಅಂಗಣದಲ್ಲಿ ನೆನಪುಗಳ ಬುತ್ತಿ ಇದೆ. ಸಿಂಗಲ್ಸ್‌, ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ಗಳಲ್ಲಿ ಮಹತ್ವದ ಪಂದ್ಯಗಳನ್ನು ಇಲ್ಲಿ ಆಡಿದ್ದೇನೆ. ಆದರೆ ವೈರಸ್ ದಾಳಿಯ ನಂತರ ದೇಹ ಬಳಲುತ್ತಿದೆ. ಯಾವುದನ್ನೂ ಖಚಿತವಾಗಿ ಹೇಳಲು ಆಗುತ್ತಿಲ್ಲ’ ಎಂದರು.

ಭಾರತದ ಪ್ರಮುಖರ ಜೊತೆ ಕಣಕ್ಕೆ ಇಳಿದಿರುವ ಸಾನಿಯಾ ಮಿರ್ಜಾ 2016ರ ರಿಯೊ ಒಲಂಪಿಕ್ಸ್‌ನಲ್ಲಿ ಪದಕದ ಸನಿಹ ತಲುಪಿದ್ದರು. ರೋಹನ್ ಬೋಪಣ್ಣ ಜೊತೆ ಮಿಶ್ರ ಡಬಲ್ಸ್‌ನಲ್ಲಿ ಸಮಿಫೈನ್ ಪ್ರವೇಶಿಸಿದ್ದ ಅವರು ಅಮೆರಿಕ ಜೋಡಿ ವೀನಸ್ ವಿಲಿಯಮ್ಸ್ ಮತ್ತು ರಾಜೀವ್ ರಾಮ್‌ಗೆ ಮಣಿದಿದ್ದರು.

ಮಹೇಶ್ ಭೂಪತಿ ಜೊತೆ ಎರಡು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2009ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು 2102ರಲ್ಲಿ ಫ್ರೆಂಚ್ ಓಪನ್‌ ಪ್ರಶಸ್ತಿಗಳು ಈ ಜೋಡಿಯ ಮುಡಿಗೇರಿವೆ.

ಜನನ: 1986ರ ನವೆಂಬರ್‌ 15; ಮುಂಬೈ

ವಾಸ: ಹೈದರಾಬಾದ್‌

ವೃತ್ತಿಜೀವನ ಆರಂಭ: 2003

ವಿವಾಹ: 2010; ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್

ಸಿಂಗಲ್ಸ್‌ ಸಾಧನೆ

ಪಂದ್ಯ 271; ಜಯ 161

ಪ್ರಶಸ್ತಿ: 1 (ಹೈದರಾಬಾದ್‌, 2005)

ಫೈನಲ್‌: 2005 (ಫಾರೆಸ್ಟ್ ಹಿಲ್ಸ್‌), 2007 (ಸ್ಟಾನ್‌ಫಾರ್ಡ್‌), 2009 (ಪಟ್ಟಾಯ)

ಗರಿಷ್ಠ ರ‍್ಯಾಂಕಿಂಗ್: 27 (2007)

ಗ್ರ್ಯಾಂಡ್‌ಸ್ಲಾಂ ಟೂರ್ನಿ

ಆಸ್ಟ್ರೇಲಿಯನ್ ಓಪನ್: 3ನೇ ಸುತ್ತು (2005, 2008)

ಫ್ರೆಂಚ್ ಓಪನ್: 2ನೇ ಸುತ್ತು (2007, 2011)

ವಿಂಬಲ್ಡನ್‌: 2ನೇ ಸುತ್ತು (2005, 2007, 2008, 2009)

ಅಮೆರಿಕ ಓಪನ್‌: 4ನೇ ಸುತ್ತು (2005)

ಒಲಿಂಪಿಕ್ಸ್‌ 1ನೇ ಸುತ್ತು (2008)

ಡಬಲ್ಸ್ ಸಾಧನೆ

ಪಂದ್ಯ 511; ಜಯ 230

ಪ್ರಶಸ್ತಿ: 43

ಗರಿಷ್ಠ ರ‍್ಯಾಂಕಿಂಗ್: 1 (2015)

ಸದ್ಯದ ರ‍್ಯಾಂಕಿಂಗ್: 68 (ಸೆಪ್ಟೆಂಬರ್‌ 27, 2021ರಿಂದ)

ಆಸ್ಟ್ರೇಲಿಯನ್ ಓಪನ್: ಪ್ರಶಸ್ತಿ (2016)

ಫ್ರೆಂಚ್ ಓಪನ್: ರನ್ನರ್ ಅಪ್‌ (2011)

ವಿಂಬಲ್ಡನ್: ಪ್ರಶಸ್ತಿ (2015)

ಅಮೆರಿಕ ಓಪನ್‌: ಪ್ರಶಸ್ತಿ (2015)

ಟೂರ್ ಫೈನಲ್ಸ್: ಪ್ರಶಸ್ತಿ (2014, 2015)

ಒಲಿಂಪಿಕ್ಸ್‌: 2ನೇ ಸುತ್ತು (2008)

ಮಿಶ್ರ ಡಬಲ್ಸ್‌ ಸಾಧನೆ

ಪ್ರಶಸ್ತಿ: 3
ಆಸ್ಟ್ರೇಲಿಯನ್ ಓಪನ್‌: ಪ್ರಶಸ್ತಿ (2009)

ಫ್ರೆಂಚ್ ಓಪನ್‌: ಪ್ರಶಸ್ತಿ (2012)

ಅಮೆರಿಕ ಓಪನ್‌: ಪ್ರಶಸ್ತಿ (2014)

ವಿಂಬಲ್ಡನ್‌: 8ರ ಘಟ್ಟ (2011, 2013, 2015)

ಒಲಿಂಪಿಕ್ಸ್‌: ಸೆಮಿಫೈನಲ್‌ (2016)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT